Webdunia - Bharat's app for daily news and videos

Install App

ಜಾನಿ ಮಾಸ್ಟರ್ ನಿಂದ ಲೈಂಗಿಕ ಕಿರುಕುಳಕ್ಕೊಳಗಾದ ಯುವತಿಗೆ ಅಲ್ಲು ಅರ್ಜುನ್ ಬೆಂಬಲಿಸಿದ್ದು ಹೀಗೆ

Krishnaveni K
ಬುಧವಾರ, 18 ಸೆಪ್ಟಂಬರ್ 2024 (11:05 IST)
ಹೈದರಾಬಾದ್: ನೃತ್ಯ ಸಂಯೋಜಕ ಜಾನಿ ಮಾಸ್ಟರ್ ನಿಂದ ರೇಪ್ ಗೊಳಗಾಗಿದ್ದಾಳೆ ಎನ್ನಲಾದ ಯುವತಿಗೆ ಈಗ ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

ಅಲ್ಲು ಅರ್ಜುನ್ ಜೊತೆಗೂ ಈ ಸಂತ್ರಸ್ತ ಕಲಾವಿದೆ ಕೆಲಸ ಮಾಡಿದ್ದಳು. ಅಲ್ಲು ಅರ್ಜುನ್ ಅವರ ಪುಷ್ಪ 2 ಸಿನಿಮಾದಲ್ಲಿ ಕೆಲಸ ಮಾಡಿದ್ದಾಳಂತೆ. ಈ ಕಾರಣಕ್ಕೆ ಜಾನಿ ಮಾಸ್ಟರ್ ನಿಂದ ಅನ್ಯಾಯಕ್ಕೊಳಗಾದ 21 ವರ್ಷದ ಯುವತಿಗೆ ಈಗ ಅಲ್ಲು ಅರ್ಜುನ್ ಬೆಂಬಲ ಘೋಷಿಸಿದ್ದಾರೆ.

ನಾನು ಸಿನಿಮಾ ಮಾಡುವವರೆಗೂ ನನ್ನ ಎಲ್ಲಾಸಿನಿಮಾಗಳಲ್ಲಿ ಈ ಯುವತಿಗೆ ಕೆಲಸ ಕೊಡುತ್ತೇನೆ ಎಂದು ಅಲ್ಲು ಅರ್ಜುನ್ ಘೋಷಿಸಿದ್ದು, ಯುವತಿಗೆ ಎಲ್ಲಾ ರೀತಿಯ ಬೆಂಬಲ ನೀಡಲು ಮುಂದಾಗಿದ್ದಾರೆ. ಜಾನಿ ಮಾಸ್ಟರ್ ತನ್ನ ಮೇಲೆ ಹೈದರಾಬಾದ್, ಮುಂಬೈ, ಚೆನ್ನೈ ಸೇರಿದಂತೆ ವಿವಿಧ ಕಡೆ ಅತ್ಯಾಚಾರವೆಸಗಿದ್ದು, ಹಲ್ಲೆಯೂ ನಡೆಸಿದ್ದಾರೆ ಎಂದು ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.

ಈ ವಿಚಾರ ಈಗ ಟಾಲಿವುಡ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ. ತನ್ನ ಮೇಲೆ ಬಂದಿರುವ ಆರೋಪಗಳೆಲ್ಲಾ ಸುಳ್ಳು ಎಂದು ಜಾನಿ ಮಾಸ್ಟರ್ ಹೇಳುತ್ತಿದ್ದಾರೆ. ಆದರೆ ಯುವತಿಯ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಅಲ್ಲು ಅರ್ಜುನ್ ಆಕೆಗೆ ಸಹಾಯ ಮಾಡಲು ಮುಂದಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Gold Smuggling Case:ಭಾರೀ ಷರತ್ತಿನೊಂದಿಗೆ ರನ್ಯಾ ರಾವ್‌ಗೆ ಸಿಕ್ತು ಜಾಮೀನು

ಈಚೆಗೆ ಆರೋಗ್ಯ ವಿಚಾರಕ್ಕೆ ಸುದ್ದಿಯಾಗಿದ್ದ ನಟ ವಿಶಾಲ್‌ಗೆ ಕೂಡಿ ಬಂತು ಕಂಕಣಭಾಗ್ಯ

Actor Darshan, ಪತ್ನಿ ಜತೆಗೆ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡು ಖುಷಿಯಲ್ಲಿದ್ದ ದರ್ಶನ್‌ಗೆ ದುಃಖದ ನ್ಯೂಸ್‌

Darshan, Pavithra Gowda: ಪವಿತ್ರಾ ಗೌಡ ಕೋರ್ಟ್ ಮುಂದೆ ಇಟ್ಟ ಹೊಸ ಬೇಡಿಕೆಯೇನು

Darshan Pavithra Gowda: ದರ್ಶನ್ ಜೊತೆ ಮತ್ತೆ ಪವಿತ್ರಾ ಗೌಡ: ನಾ ನಿನ್ನ ಬಿಡಲಾರೆ ಪಾರ್ಟ್ 2 ನಾ ಎಂದ ನೆಟ್ಟಿಗರು

ಮುಂದಿನ ಸುದ್ದಿ