Publish Date: Sat, 18 Jun 2022 (11:12 IST)
Updated Date: Sat, 18 Jun 2022 (09:14 IST)
ಹೈದರಾಬಾದ್: ಸದ್ಯಕ್ಕೆ ಪುಷ್ಪ 2 ಸಿನಿಮಾದ ಶೂಟಿಂಗ್ ಗೆ ರೆಡಿಯಾಗಿರುವ ಅಲ್ಲು ಅರ್ಜುನ್ ಮುಂದಿನ ಸಿನಿಮಾ ಬಗ್ಗೆ ಮಾತುಕತೆಯಲ್ಲಿದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಲೇ ಇದೆ.
ಇದೀಗ ಅಲ್ಲು ಅರ್ಜುನ್ ಮುಂದಿನ ಸಿನಿಮಾ ಬಗ್ಗೆ ಸುಳಿವು ಸಿಕ್ಕಿದೆ. ಸ್ಟೈಲಿಶ್ ತಾರೆ ವಿಕ್ರಂ ನಿರ್ದೇಶಕ ಲೋಕೇಶ್ ಕನಗರಾಜು ಜೊತೆ ಮುಂದಿನ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿಯಿದೆ.
ಈಗಾಗಲೇ ಈ ಬಗ್ಗೆ ಮಾತುಕತೆ ನಡೆದಿದೆಯಂತೆ. ಈ ಮೂಲಕ ಯಶಸ್ವೀ ನಿರ್ದೇಶಕ ಲೋಕೇಶ್ ತೆಲುಗು ಚಿತ್ರರಂಗಕ್ಕೆ ಅಡಿಯಿಡಲಿದ್ದಾರೆ. ವಿಕ್ರಂ ಯಶಸ್ಸಿನ ಬಳಿಕ ಲೋಕೇಶ್ ಗೆ ಭಾರೀ ಬೇಡಿಕೆಯಿದೆ.