ಚೆನ್ನೈ: ದಳಪತಿ ವಿಜಯ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಇನ್ನೂ ಹೆಸರಿಡದ ಹೊಸ ಸಿನಿಮಾಗೆ ಈಗ ಆನ್ ಲೈನ್ ಸೋರಿಕೆ ಕಾಟ ಶುರುವಾಗಿದೆ.
ಇದುವರೆಗೆ ಚಿತ್ರತಂಡ ಚೆನ್ನೈನಲ್ಲಿ ಚಿತ್ರೀಕರಣ ನಡೆಸುತ್ತಿತ್ತು. ಫೈನಲ್ ಚಿತ್ರೀಕರಣವನ್ನೂ ಇಲ್ಲೇ ನಡೆಸಲು ತಯಾರಿ ನಡೆಸಿತ್ತು. ಆದರೆ ಇದು ರೆಸಿಡೆನ್ಷಿಯಲ್ ಪ್ರದೇಶವಾದ್ದರಿಂದ ಚಿತ್ರೀಕರಣಕ್ಕೆ ಸದಾ ಜನ ಬರುತ್ತಿರುತ್ತಾರೆ. ಜೊತೆಗೆ ಇತ್ತೀಚೆಗೆ ಚಿತ್ರೀಕರಣದ ಫೋಟೋಗಳೂ ಆನ್ ಲೈನ್ ನಲ್ಲಿ ಸೋರಿಕೆಯಾಗಿತ್ತು.
ಇದರಿಂದಾಗಿ ಬೇಸತ್ತ ಚಿತ್ರತಂಡ ಈಗ ಹೈದರಾಬಾದ್ ಗೆ ಶೂಟಿಂಗ್ ಸ್ಥಳಾಂತರಿಸಲು ತೀರ್ಮಾನಿಸಿದೆಯಂತೆ. ಇಲ್ಲಿ ಖಾಸಗಿ ಸ್ಥಳವೊಂದರಲ್ಲಿ ಚಿತ್ರೀಕರಣ ನಡೆಯಲಿದೆ ಎನ್ನಲಾಗಿದೆ.