Webdunia - Bharat's app for daily news and videos

Install App

ನಟ ಧನುಷ್ ಮೇಲೆ ನಟಿ ನಯನತಾರಾ ಗಂಭೀರ ಆರೋಪ: ಸೋಶಿಯಲ್ ಮೀಡಿಯಾದಲ್ಲೇ ನಡೆಯಿತು ಕಿತ್ತಾಟ

Sampriya
ಶನಿವಾರ, 16 ನವೆಂಬರ್ 2024 (17:35 IST)
Photo Courtesy X
ಇದೇ 18ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಗೆ ತಯಾರಾದ 'ನಯನತಾರಾ: ಬಿಯಾಂಡ್ ದಿ ಫೇರಿ' ಟೇಲ್‌'ನಲ್ಲಿ ನಾನುಮ್ ರೌಡಿ ಧಾನ್‌ ಸಿನಿಮಾದ ಮೂರು ಸೆಕೆಂಡಿನ ದೃಶ್ಯ ಬಳಸಿದ್ದಕ್ಕೆ  ₹10ಕೋಟಿ ಬೇಡಿಕೆಯಿಟ್ಟು ಲೀಗಲ್ ನೋಟಿಸ್ ಕಳುಹಿಸಿದ ನಟ ಧನುಷ್‌ಗೆ ನಟಿ ನಯನತಾರಾ ಬಹಿರಂಗ ಪತ್ರ ಬರೆದು ವಾಗ್ದಾಳಿ ನಡೆಸಿದ್ದಾರೆ.

ನಟ ಧನುಷ್‌ಗೆ ಕೌಂಟರ್ ಕೊಟ್ಟು ನಯನತಾರಾ ಸಾಮಾಜಿಕ ಜಾಲತಾಣದಲ್ಲಿ ಎರಡು ಪುಟಗಳ ಪತ್ರವನ್ನು ಬರೆದಿದ್ದಾರೆ.

ತಾನು ನಿರ್ಮಾಣ ಮಾಡಿದ ನಾನುಮ್ ರೌಡಿ ಧಾನ್ ಸಿನಿಮಾದ ಮೂರು ಸೆಕೆಂಡ್‌ಗಳ ದೃಶ್ಯ ಬಳಸಿದ್ದಕ್ಕೆ ಧನುಷ್ ನೋಟಿಸ್ ಕಳುಹಿಸಿದ್ದಾರೆ. ಇದಕ್ಕೆ ನಯನತಾರಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ನಾನು ಸಾಕ್ಷ್ಯಚಿತ್ರದಲ್ಲಿ 2015ರ ನಾನುಮ್ ರೌಡಿ ಧಾನ್ ಚಿತ್ರದ ದೃಶ್ಯಗಳನ್ನು ಬಳಸಲು ಧನುಷ್ ಅವರಲ್ಲಿ ಅನುಮತಿ ಕೋರಿದ್ದೆ. ಆದರೆ ಎಲ್ಲ ಪ್ರಯತ್ನಗಳು ವಿಫಲವಾದವು. ಅನುಮತಿ ನಿರಾಕರಿಸಿದ ಹಿನ್ನೆಲೆ ಸಾಕ್ಷ್ಯಚಿತ್ರವನ್ನು ಮರು ಚಿತ್ರೀಕರಿಸುವುದಾಗಿ ಹೇಳಿದ್ದಾರೆ.

ನೆಟ್‌ಫ್ಲಿಕ್ಸ್ ಡಾಕ್ಯುಮೆಂಟರಿಯ ಟ್ರೇಲರ್ ಬಿಡುಗಡೆಯಾದ ನಂತರ ನಿಮ್ಮ ಲೀಗಲ್ ನೋಟಿಸ್ ಇನ್ನಷ್ಟು ಆಘಾತಕಾರಿಯಾಗಿದೆ ಎಂದು ನಟಿ ಸೇರಿಸಿದ್ದಾರೆ. ನಮ್ಮ ವೈಯಕ್ತಿಕ ಸಾಧನಗಳಲ್ಲಿ ಚಿತ್ರೀಕರಿಸಲಾದ ಕೆಲವು ವೀಡಿಯೊಗಳ (ಕೇವಲ 3 ಸೆಕೆಂಡುಗಳು) ಬಳಕೆಯನ್ನು ನೀವು ಪ್ರಶ್ನಿಸಿದ ಆ ಸಾಲುಗಳನ್ನು ಓದಿ ನಾವು ಗಾಬರಿಗೊಂಡಿದ್ದೇವೆ ಮತ್ತು ಅದು ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ಸಾರ್ವಜನಿಕವಾಗಿ ಪ್ರಸ್ತುತವಾಗಿರುವ BTS ದೃಶ್ಯಗಳು ಮತ್ತು ರೂ.10ಕೋಟಿಯನ್ನು ಮೊತ್ತವನ್ನು ಕ್ಲೈಮ್ ಮಾಡಿದೆ. ಕೇವಲ 3 ಸೆಕೆಂಡ್‌ಗಳಿಗೆ ಕೋಟಿಗಳಷ್ಟು ಹಾನಿಯಾಗಿದೆ.

ಅಭಿಮಾನಿಗಳು ನೋಟಿದ ಧನುಷ್ ಬೇರೆ ಅಸಲಿ ಧನುಷ್ ಬೇರೆಯೇ. ಇಷ್ಟೊಂದು ಕೀಳುಮಟ್ಟಕ್ಕೆ ಇಳಿದಿದ್ದಾರೆಂದು ವಾಗ್ದಾಳಿ ನಡೆಸಿದ್ದಾರೆ.

ಅದಲ್ಲದೆ ಈ ಲೀಗಲ್‌ ನೋಟಿಸ್‌ಗೆ ತಕ್ಕ ಪ್ರತ್ಯುತ್ತರ ನೀಡುವುದಾಗಿ ನಯನತಾರಾ ಸವಾಲು ಎಸೆದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ಅಜಿತ್ ಕುಮಾರ್‌ಗೆ ಯಾಕೆ ಪದೇ ಪದೇ ಹೀಗಾಗುತ್ತಿದೆ, ಅಭಿಮಾನಿಗಳಿಗೆ ಟೆನ್ಷನ್‌

Darshan Thoogudeepa video: ಪತ್ನಿಯನ್ನು ತಬ್ಬಿಕೊಂಡು ಮುದ್ದು ರಾಕ್ಷಸಿ ಎಂದು ದರ್ಶನ್ ಡ್ಯಾನ್ಸ್ ಮಾಡಿದ್ದೇ ಮಾಡಿದ್ದು

Darshan: ವಿವಾಹ ವಾರ್ಷಿಕೋತ್ಸವಕ್ಕೆ ದರ್ಶನ್ ಜೊತೆಗಿರುವ ಫೋಟೋ ಹಾಕಿ ಸಖತ್ ಟಾಂಗ್ ಕೊಟ್ಟ ವಿಜಯಲಕ್ಷ್ಮಿ

Drithi PuneethRajkumar: ಪುನೀತ್ ಮಗಳ ಸಾಧನೆಯನ್ನು ಕೊಂಡಾಡಿದ ಶಿವರಾಜ್‌ಕುಮಾರ್‌

Thug Life Cinema:ನಟಿ ಅಭಿರಾಮಿ ಜತೆ ರೋಮ್ಯಾಂಟಿಕ್ ದೃಶ್ಯದಲ್ಲಿ ಕಮಲ್ ಹಾಸನ್‌, ಇದು ಬೇಕಿತ್ತಾ ಎಂದ ಫ್ಯಾನ್ಸ್‌

ಮುಂದಿನ ಸುದ್ದಿ
Show comments