Publish Date: Saturday, 04 December 2021 (14:43 IST)
Updated Date: Saturday, 04 December 2021 (14:45 IST)
ಬೆಂಗಳೂರು: ಸ್ಯಾಂಡಲ್ ವುಡ್ ಗೆ ಮತ್ತೊಂದು ಆಘಾತ ಸಿಕ್ಕಿದೆ. ಹಿರಿಯ ನಟ ಎಸ್. ಶಿವರಾಂ ಇಹಲೋಕದ ಯಾತ್ರೆ ಮುಗಿಸಿದ್ದಾರೆ.
ಮನೆಯಲ್ಲಿ ಬಿದ್ದು ತಲೆಗೆ ತೀವ್ರ ಪೆಟ್ಟು ಮಾಡಿಕೊಂಡಿದ್ದ ಶಿವರಾಂ ಕಳೆದ ನಾಲ್ಕೈದು ದಿನಗಳಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗಾಯ ತೀವ್ರವಾಗಿದ್ದರಿಂದ ಮಿದುಳು ನಿಷ್ಕ್ರಿಯವಾಗಿತ್ತು ಮತ್ತು ಅವರು ಕೋಮಾಗೆ ಜಾರಿದ್ದರು.
ಇಂದಿನವರೆಗೂ ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬಂದಿರಲಿಲ್ಲ. ಇದೀಗ ವೈದ್ಯರು ಅವರು ನಿಧನರಾಗಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಕನ್ನಡ ಚಿತ್ರರಂಗದ ಪಾಲಿಗೆ ಶಿವರಾಮಣ್ಣ ಎಂದೇ ಕರೆಯಿಸಿಕೊಳ್ಳುತ್ತಿದ್ದ ಶಿವರಾಂ ನಿಧನ ತುಂಬಲಾರದ ನಷ್ಟವಾಗಿದೆ.