Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ವಿಕ್ರಾಂತ್ ರೋಣ ಬಿಡುಗಡೆಗಾಗಿ ಕಾಯುತ್ತಿರುವ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ.
ಸುದೀಪ್ ಇಂದು ತಮ್ಮ ಹೊಸ ಸಿನಿಮಾ ಬಗ್ಗೆ ಸುಳಿವೊಂದನ್ನು ಕೊಟ್ಟಿದ್ದಾರೆ. ವಿಕ್ರಾಂತ್ ರೋಣ ಫೆಬ್ರವರಿ 24 ರಂದು ಬಿಡುಗಡೆಯಾಗಬೇಕಿತ್ತು. ಆದರೆ ಮುಂದೂಡಿಕೆಯಾಗಿದೆ. ಇದೀಗ ಹೊಸ ರಿಲೀಸ್ ದಿನಾಂಕ ಘೋಷಣೆಯಾಗಬೇಕಿದೆ. ಅದು ಸದ್ಯದಲ್ಲೇ ಆಗಲಿದೆ ಎಂದಿದ್ದಾರೆ ಸುದೀಪ್. ಅದರ ಜೊತೆಗೆ ತಮ್ಮ ಹೊಸ ಸಿನಿಮಾ ಬಗ್ಗೆ ಹೇಳಿದ್ದಾರೆ.
ವಿಕ್ರಾಂತ್ ರೋಣ 3ಡಿ ಲುಕ್ ಅದ್ಭುತವಾಗಿದೆ. ಸದ್ಯದಲ್ಲೇ ರಿಲೀಸ್ ದಿನಾಂಕ ಘೋಷಿಸುತ್ತೇವೆ. ಅದರ ಜೊತೆಗೆ ನನ್ನ ಮುಂದಿನ ಸಿನಿಮಾ ಅನೂಪ್ ಭಂಡಾರಿ ಜೊತೆಗೆ. ಅದೂ ಸದ್ಯದಲ್ಲೇ ಘೋಷಣೆಯಾಗಲಿದೆ. ಅದಕ್ಕಾಗಿ ಎದಿರು ನೋಡುತ್ತಿದ್ದೇನೆ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಕೂಡಾ ಭಾಗಿಯಾಗಲಿದ್ದಾರೆ.
ಅನೂಪ್ ಭಂಡಾರಿ ಜೊತೆಗೆ ಸುದೀಪ್ ಬಿಲ್ಲ ರಂಗ ಭಾಷ ಮತ್ತು ಅಶ್ವತ್ಥಾಮ ಎಂಬ ಎರಡು ಸಿನಿಮಾಗಳ ಟೈಟಲ್ ಈ ಮೊದಲು ಘೋಷಣೆಯಾಗಿತ್ತು. ಈ ಪೈಕಿ ಯಾವ ಸಿನಿಮಾವನ್ನು ಅವರು ಮೊದಲು ಮಾಡಲಿದ್ದಾರೆ ಎಂದು ಕಾದು ನೋಡಬೇಕಿದೆ.