ನಟ ಚೇತನ್ ಅರೆಸ್ಟ್: 14 ದಿನ ನ್ಯಾಯಾಂಗ ಬಂಧನ

Webdunia
ಬುಧವಾರ, 23 ಫೆಬ್ರವರಿ 2022 (09:30 IST)
ಬೆಂಗಳೂರು: ಸ್ಯಾಂಡಲ್ ವುಡ್ ನಟ ಆ ದಿನಗಳು ಖ್ಯಾತಿಯ ಚೇತನ್ ಅವರನ್ನು ಟ್ವೀಟ್ ಒಂದಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ.

ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೆಯ ಟ್ವೀಟ್ ಒಂದನ್ನು ಚೇತನ್ ರಿಟ್ವೀಟ್ ಮಾಡಿದ್ದರು. ಪ್ರಕರಣ ನ್ಯಾಯಾಲಯದಲ್ಲಿರುವಾಗಲೇ ನ್ಯಾಯಮೂರ್ತಿಗಳನ್ನು ಅವಹೇಳನ ಮಾಡುವ ಪೋಸ್ಟ್ ಮಾಡಿದ್ದರು. ಈ ಕಾರಣಕ್ಕೆ ಅವರನ್ನು ನಿನ್ನೆ ಬಂಧಿಸಲಾಗಿತ್ತು.

ಆ ಬಳಿಕ ಹೈಡ್ರಾಮವೇ ನಡೆಯಿತು. ನನ್ನ ಗಂಡನನ್ನು ಪೊಲೀಸರು ಅಪಹರಿಸಿದ್ದಾರೆ ಎಂದು ಚೇತನ್ ಪತ್ನಿ ದೂರಿದ್ದರು. ಬಳಿಕ ಅವರನ್ನು ಆಕ್ಷೇಪಾರ್ಹ ಟ್ವೀಟ್ ಹಿನ್ನಲೆಯಲ್ಲಿ ಬಂಧಿಸಲಾಗಿದೆ ಎಂದು ಕಮಿಷನರ್ ಕಚೇರಿಯಿಂದ ಸ್ಪಷ್ಟನೆ ನೀಡಲಾಯ್ತು.

ಬಳಿಕ ಚೇತನ್ ರನ್ನು 8 ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಇಲ್ಲಿ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇದಾದ ಬಳಿಕ ಮಾತನಾಡಿದ ಚೇತನ್ ಪತ್ನಿ ಮೇಘನಾ ಕಾನೂನು ಪ್ರಕಾರ ಹೋರಾಡುವುದಾಗಿ ಹೇಳಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಟಾಕ್ಸಿಕ್ ಟೀಸರ್ ನಲ್ಲಿ ಬಿಗ್ ಶಾಕ್ ಕೊಟ್ಟ ರಾಕಿಂಗ್ ಸ್ಟಾರ್ ಯಶ್ Video

ಚೆನ್ನಾಗಿಲ್ಲಾಂದ್ರೂ 100 ಕೊಟ್ಟು ಸಿನಿಮಾ ನೋಡ್ರೀ ಎಂದ ರವಿಚಂದ್ರನ್: ದುಡ್ಡಿನ ಬೆಲೆ ಗೊತ್ತಿದೆ ಎಂದ ನೆಟ್ಟಿಗರು

ಸೂಪರ್‌ ಸ್ಟಾರ್‌ ಸಲ್ಮಾನ್ ಖಾನ್ ತಂದೆ ಸಲೀಮ್ ಖಾನ್ ಆರೋಗ್ಯದಲ್ಲಿ ಭಾರೀ ಏರುಪೇರು

ಕಿರಿಕ್ ಬೆಡಗಿ ರಶ್ಮಿಕಾ ಮದುವೆ ಆಹ್ವಾನದ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ

ಮೊದಲ ಮಗಳು ಗೌರಿ ಜೊತೆ ಸಂಬಂಧ ಹೇಗಿದೆ ಎಂದು ಬಿಚ್ಚಿಟ್ಟ ನಿರ್ದೇಶಕ ಎಸ್ ಮಹೇಂದರ್ Video

ಮುಂದಿನ ಸುದ್ದಿ
Show comments