Select Your Language

Notifications

webdunia
webdunia
webdunia
webdunia

ಡ್ರಿಂಕ್ಸ್ ಮಾಡ್ತೀರಾ? ಎಂದು ಕೇಳಿದ ಅಭಿಮಾನಿಗೆ ಅಭಿಷೇಕ್ ಅಂಬರೀಶ್ ಕೊಟ್ಟ ಉತ್ತರವಿದು!

ಅಭಿಷೇಕ್ ಅಂಬರೀಶ್
ಬೆಂಗಳೂರು: ಜ್ಯೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಅಭಿಮಾನಿಗಳೊಂದಿಗೆ ಪ್ರಶ್ನೋತ್ತರಾವಳಿ ನಡೆಸಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬರು ಅವರಿಗೆ ತೀರಾ ವೈಯಕ್ತಿಕ ಪ್ರಶ್ನೆಯೊಂದನ್ನು ಕೇಳಿದ್ದಾರೆ.


ಅಭಿಮಾನಿಯೊಬ್ಬರು ಹಿಂಜರಿಕೆಯಿಂದಲೇ ಅಭಿಗೆ ‘ನೀವು ಡ್ರಿಂಕ್ಸ್ ಮಾಡುವುದಾದರೆ ವೈನ್, ಬಿಯರ್ ಅಥವಾ ಹಾಟ್ಸ್ ಏನು ಪ್ರಿಫರ್ ಮಾಡುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ತಕ್ಕ ಉತ್ತರ ಕೊಟ್ಟಿರುವ ಅಭಿ ‘ಸದ್ಯಕ್ಕೆ ಕೇವಲ ಒಂದು ಲೋಟ ನೀರು ಮಾತ್ರ’ ಎಂದಿದ್ದಾರೆ. ಅಷ್ಟೇ ಅಲ್ಲದೆ,  ಈ ಪ್ರಶ್ನೋತ್ತರಾವಳಿಯಲ್ಲಿ ಥೇಟ್ ಅಂಬಿ ಶೈಲಿಯಲ್ಲೇ ನೇರಾ ನೇರ ಉತ್ತರ ಕೊಟ್ಟು ಗಮನ ಸೆಳೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾರು ಚಾಲಕನ ಹುಟ್ಟುಹಬ್ಬವನ್ನು ಆಚರಿಸಿ ಹೃದಯ ಗೆದ್ದ ಪುನೀತ್ ರಾಜಕುಮಾರ್