Publish Date: Sun, 28 Nov 2021 (09:18 IST)
Updated Date: Sun, 28 Nov 2021 (09:20 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನವಾದ ಬಳಿಕ ಅವರ ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ಗೌರವ ನಮನ ಸಲ್ಲಿಸುತ್ತಿವೆ.
ಪುನೀತ್ ಮಾಡಿದ ಸಾಮಾಜಿಕ ಕಾರ್ಯಗಳ ನೆನಪಿನಲ್ಲಿ ರಾಜ್ಯದ ಹಲವು ಹಳ್ಳಿಗಳು, ನಗರಗಳ ರಸ್ತೆಗಳಿಗೆ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ.
ವಿಶೇಷವೆಂದರೆ ಈಗಾಗಲೇ ಕರ್ನಾಟಕದಾದ್ಯಂತ ಸುಮಾರು 70 ಕ್ಕೂ ಹೆಚ್ಚು ರಸ್ತೆಗಳಿಗೆ ಪುನೀತ್ ಹೆಸರಿಡಲಾಗಿದೆ. ಅದರಲ್ಲೂ ವಿಶೇಷವಾಗಿ ಶಿವಮೊಗ್ಗ ಜಿಲ್ಲೆಯೊಂದರಲ್ಲೇ 20 ಕ್ಕೂ ಹೆಚ್ಚು ರಸ್ತೆಗಳಿಗೆ ಅಪ್ಪು ಹೆಸರಿಡಲಾಗಿದೆ. ಇದು ಅವರ ಮೇಲಿನ ಜನರ ಪ್ರೀತಿಗೆ ಸಾಕ್ಷಿಯಾಗಿದೆ.