ಜಗತ್ತಿನಾದ್ಯಂತ ವಾಟ್ಸಾಪ್ ಕ್ರ್ಯಾಷ್ ಆಗಿದ್ದು ಕಾರ್ಯನಿರ್ವಹಿಸುತ್ತಿಲ್ಲ. ಇಡೀ ವಿಶ್ವದಾದ್ಯಂತ ವಾಟ್ಸಾಪ್ ಅಪ್ಲಿಕೇಶನ್ ಕ್ರ್ಯಾಶ್ ಆಗಿ ಸಂದೇಶಗಳು ಬ್ಲಾಕ್ ಆಗಿವೆ ಎಂದು ಮೂಲಗಳು ತಿಳಿಸಿವೆ.
ವಾಟ್ಸಾಪ್ ಕೈ ಕೊಟ್ಟಿದ್ದರಿಂದ ಮೊಬೈಲ್ ಬಳಕೆದಾರರು ಕಂಗಾಲಾಗಿ ಮತ್ತೊಬ್ಬರಿಗೆ ಕರೆ ಮಾಡಿ ಯಾಕೆ ವಾಟ್ಸಾಪ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ಕೇಳುತ್ತಿದ್ದಾರೆ.
ವಾಟ್ಸಾಪ್ ಬಳಕೆದಾರರು ಪದೇ ಪದೇ ಕಾರ್ಯನಿರ್ವಹಿಸುತ್ತಿದೆಯೇ ಎಂದು ನೋಡುತ್ತಾ ಗೋಳುಹಾಕುತ್ತಿದ್ದಾರೆ. ಭಾರತ, ಯುರೋಪ್ ಮತ್ತು ಅಮೆರಿಕ, ರಷ್ಯಾ ಸೇರಿದಂತೆ ಕೆಲ ರಾಷ್ಟ್ರಗಳಲ್ಲಿ ವಾಟ್ಸಪ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.
ವಾಟ್ಸಾಪ್ ಅಪ್ಲಿಕೇಶನ್ ಕ್ರ್ಯಾಶ್ ಆಗಿದ್ದು, ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ. ಕೆಲವೇ ಕ್ಷಣಗಳಲ್ಲಿ ಮತ್ತೆ ವಾಟ್ಸಾಪ್ ಸೇವೆ ಆರಂಭವಾಗಲಿದೆ ಎಂದು ವಾಟ್ಸಪ್ ಸಂಸ್ಥೆಯ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.