Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಜೂನ್ 30ರಿಂದ ಈ ಮೊಬೈಲ್`ಗಳಲ್ಲಿ ವಾಟ್ಸಾಪ್ ವರ್ಕ್ ಆಗುವುದಿಲ್ಲ

ಜೂನ್ 30ರಿಂದ ಈ ಮೊಬೈಲ್`ಗಳಲ್ಲಿ ವಾಟ್ಸಾಪ್ ವರ್ಕ್ ಆಗುವುದಿಲ್ಲ
ಮುಂಬೈ , ಸೋಮವಾರ, 12 ಜೂನ್ 2017 (19:08 IST)
ಜಗತ್ತಿನ ಪ್ರಸಿದ್ಧ ಸಾಮಾಜಿಕ ಸಂದೇಶ ತಾಣ ವಾಟ್ಸಾಪ್ ಇನ್ನೂ ಕೆಲವೇ ದಿನಗಳಲ್ಲಿ ಕೆಲ ಹಳೆಸ ವರ್ಶನ್ ಸಾಫ್ಟ್ ವೇರ್ ಹೊಂದಿರುವ ಮೊಬೈಲ್`ಗಳಲ್ಲಿ ಕೆಲಸ ಮಾಡುವುದಿಲ್ಲ.

ಹೌದು, ಬ್ಲಾಕ್ ಬೆರ್ರಿ ಒಎಸ್, ಬ್ಲಾಕ್ ಬೆರ್ರಿ 10, ನೋಕಿಯಾ ಎಸ್ 40, ನೋಕಿಯಾ ಎಸ್ 60 ಮೊಬೈಲ್`ಗಳಲ್ಲಿ ಜೂನ್ 30ರಿಂದ ವಾಟ್ಸಾಪ್ ವರ್ಕ್ ಆಗುವುದಿಲ್ಲ. ಕಳೆದ ನವೆಂಬರ್`ನಲ್ಲಿ ಫೇಸ್ಬುಕ್ ಒಡೆತನದಲ್ಲಿರುವ ವಾಟ್ಸಾಪ್ ಈ ಮೊಬೈಲ್`ಗಳಿಗೆ ಸಾಫ್ಟ್`ವೇರ್ ಸಪೋರ್ಟ್ ನಿಲ್ಲಿಸಲು ನಿರ್ಧರಿಸಿ ಜೂನ್ 30ರವರೆಗೆ ವಿಸ್ತರಿಸಲಾಗಿತ್ತು.

ಹೀಗಾಗಿ, ಬ್ರಾಂಡ್`ಗಳ ಮೊಬೈಲ್ ಬಳಸುತ್ತಿರುವವರು ಹೊಸ ಸಾಫ್ಟ್`ವೇರ್ ಮೊಬೈಲ್ ಬಳಸಲು ಪ್ರಾರಂಭಿಸಿದರೆ ಉತ್ತಮ ಎಂದು ವಾಟ್ಸಾಪ್ ತಿಳಿಸಿದೆ. ಬ್ಲಾಕ್ ಬೆರ್ರಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಇದಕ್ಕೆ ಸ್ಪಷ್ಟನೆ ನೀಡಿರುವ ವಾಟ್ಸಾಪ್ ಸಂಸ್ಥೆ ಸಾಫ್ಟ್`ವೇರ್ ಅಪ್ಡೇಟ್ ಮಾಡಬೇಕಿರುವುದರಿಂದ ಹಳೆ ವರ್ಶನ್ ಸಾಫ್ಟ್`ವೇರ್ ಇರುವ ಮೊಬೈಲ್`ಗಳಲ್ಲಿ ವಾಟ್ಸಾಪ್ ಸೇವೆ ಒದಗಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/

Share this Story:

Follow Webdunia kannada

ಮುಂದಿನ ಸುದ್ದಿ

ಹಿರಿಯರಾಗಿದ್ರೂ ಜನಮನ್ನಣೆ ಇರದ ನಾಯಕರಿಗೆ ಟಿಕೆಟ್ ಇಲ್ಲ: ರಾಹುಲ್