ಬೆಂಗಳೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಪೇಯಿ ಮತ್ತು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಹೆಸರಿನಲ್ಲಿ ಕೇಂದ್ರ ಸರ್ಕಾರ ವಿದ್ಯಾರ್ಥಿಗಳಿಗೆ ಹೊಸ ಸ್ಕಾಲರ್ ಶಿಪ್ ಸ್ಕೀಮ್ ಶುರು ಮಾಡಿದೆ ಎಂಬ ಸಂದೇಶ ವಾಟ್ಸಾಪ್ ನಲ್ಲಿ ನಿಮಗೆ ಬಂದಿರಬಹುದು.
ಎಸ್ಎಸ್ಎಲ್ ಸಿಯಲ್ಲಿ ಶೇ. 75 ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ 10,000 ರೂ. ಮತ್ತು ಪಿಯುಸಿಯಲ್ಲಿ ಶೇ. 85 ಕ್ಕಿಂತ ಹೆಚ್ಚು ಅಂಕ ಗಳಿಸಿದವರಿಗೆ 25,000 ರೂ. ಕೇಂದ್ರ ಸರ್ಕಾರದ ವತಿಯಿಂದ ಸ್ಕಾಲರ್ ಶಿಪ್ ನೀಡಲಾಗುತ್ತದೆ. ಹೆಚ್ಚಿನ ವಿವರಗಳಿಗೆ
http://www.desw.gov.in/SCHOLARSHIP ಲಾಗ್ ಆನ್ ಮಾಡಿ ಎಂಬ ಸಂದೇಶ ವ್ಯಾಟ್ಸಪ್ ನಲ್ಲಿ ಹರಿದಾಡುತ್ತಿದೆ.
ಆದರೆ ಇದನ್ನು ನೋಡಿ ಮೋಸ ಹೋಗಬೇಡಿ. ಅಸಲಿಗೆ ಇಂತಹ ಯೋಜನೆಯೇ ಕೇಂದ್ರ ಸರ್ಕಾರ ಹೊರ ತಂದಿಲ್ಲ. ವಾಟ್ಸಪ್ ನಲ್ಲಿ ಯಾರೋ ಕಿಡಿಗೇಡಿಗಳು ಹರಡುತ್ತಿರುವ ಬೋಗಸ್ ಸುದ್ದಿ ಇದಾಗಿದೆ. ಪ್ರಧಾನ ಮಂತ್ರಿ ವಿದ್ಯಾರ್ಥಿ ವೇತನ ಸೌಲಭ್ಯವಿದೆ. ಆದರೆ ಅದನ್ನು ಆಯ್ದ ವಿದ್ಯಾರ್ಥಿಗಳಿಗೆ ಮಾತ್ರ ನೀಡಲಾಗುತ್ತದೆ.
ಈ ಸಂದೇಶವೇ ಗೊಂದಲಮಯವಾಗಿದೆ. ಹಾಗಾಗಿ ಶೇರ್ ಮಾಡಿ ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಮಾಡಬೇಡಿ. ನಕಲಿ ವಿದ್ಯಾರ್ಥಿ ವೇತನದ ಸ್ಕೀಮ್ ನ ಬಗ್ಗೆ ವಿದ್ಯಾರ್ಥಿಗಳು ಎಚ್ಚರವಾಗಿರುವುದು ಒಳ್ಳೆಯದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ