ನವದೆಹಲಿ : ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021-22ನೇ ಸಾಲಿನ ಕೇಂದ್ರದ ಬಜೆಟ್ ಮಂಡಿಸಿದ್ದಾರೆ. ಅದರಲ್ಲಿ ಕೆಲವು ವಸ್ತುಗಳ ಬೆಲೆ ಏರಿಕೆಯಾದರೆ, ಕೆಲವು ಇಳಿಕೆಯಾಗಿದೆ. ಅವು ಯಾವುದೆಂಬುದನ್ನು ತಿಳಿದುಕೊಳ್ಳೊಣ.
ಏರಿಕೆ :
*ಜವಳಿ, ಉಕ್ಕು, ಉತ್ಪನ್ನಗಳ ಮೇಲೂ ಅಬಕಾರಿ ಸುಂಕ ಹೆಚ್ಚಳ
*ರೆಡಿಮೇಡ್ ವಸ್ತುಗಳ ಆಮದಿಗೆ ಸುಂಕ ಹೆಚ್ಚಳ
*ಸೋಲಾರ್, ಇನ್ವರ್ಟರ್ ಮೇಲಿನ ಆಮದು ಸುಂಕ ಏರಿಕೆ.
*ಹತ್ತಿ , ಕಚ್ಚಾ ರೇಷ್ಮೆ ಮೇಲಿನ ಅಬಕಾರಿ ಸುಂಕ ಏರಿಕೆ.
*ಪ್ಲಾಸ್ಟಿಕ್ ಉತ್ಪನ್ನಗಳ ಮೇಲಿನ ಸುಂಕ ಏರಿಕೆ.
*ಲೇದರ್ ಉತ್ಪನ್ನಗಳ ಮೇಲಿನ ಸುಂಕ ಏರಿಕೆ.
*ರತ್ನದ ಬೆಲೆ ದುಬಾರಿ
*ಸ್ಟೀಲ್ ತಾಮ್ರ, ಪೇಯಿಂಟ್ ಇನ್ನಷ್ಟು ಅಗ್ಗ
*ಮೊಬೈಲ್, ಟಿ.ವಿ, ಫ್ರಿಡ್ಜ್ ಬೆಲೆ ಏರಿಕೆ.
ಇಳಿಕೆ :
* ಮೊಬೈಲ್ ಬಿಡಿಭಾಗಗಳ ಆಮದಿಗೆ ಅಬಕಾರಿ ಸುಂಕ ಇಳಿಕೆ
*ಕಚ್ಚಾ ವಸ್ತುಗಳ ಆಮದಿಗೆ ಅಬಕಾರಿ ಸುಂಕ ಇಳಿಕೆ
*ವಾಹನಗಳ ಬಿಡಿಭಾಗಗಳ ಆಮದಿಗೆ ಸುಂಕ ಇಳಿಕೆ
*ಚಿನ್ನ, ಬೆಳ್ಳಿ ಬೆಲೆ ಇಳಿಕೆ.