ನವದೆಹಲಿ : ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021-22ನೇ ಸಾಲಿನ ಕೇಂದ್ರದ ಬಜೆಟ್ ಮಂಡನೆ ಮಾಡಿದ್ದಾರೆ. ಅದರಲ್ಲಿ ರೈತರಿಗೆ ಬಂಪರ್ ಕೊಡುಗೆ ನೀಡಿದ್ದಾರೆ.
ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ. ಎಂಎಸ್ ಪಿ ಅಡಿ ಸರ್ಕಾರದಿಂದಲೇ ಖರೀದಿ ಹೆಚ್ಚಳ. ಖರ್ಚಿನ ಒಂದೂವರೆ ಪಟ್ಟು ಹೆಚ್ಚು ಬೆಲೆಗೆ ಖರೀದಿ ಮಾಡಲಿದೆ. ಕನಿಷ್ಠ ಬೆಂಬಲದಿಂದ 43 ಕೋಟಿ ರೈತರಿಗೆ ಲಾಭವಾಗಲಿದೆ ಎನ್ನಲಾಗಿದೆ.
ಧಾನ್ಯಗಳ ಖರೀದಿಗೆ 10,500 ಕೋಟಿ ಮೀಸಲು ಇಡಲಾಗಿದೆ. ಹಾಗೇ ಕೃಷಿ ಸಾಲಕ್ಕೆ 16.5ಲಕ್ಷ ಕೋಟಿ ರೂ.ಮೀಸಲು ಇಡುವುದಾಗಿ ಅವರು ತಿಳಿಸಿದ್ದಾರೆ.