ಛತ್ತೀಸ್ಗಡ ರಾಜ್ಯದಲ್ಲಿ ವಿದ್ಯಾವಂತರಿಗೆ ಮಾಸಿಕ 2,500 ರೂ. ನಿರುದ್ಯೋಗ ಭತ್ಯೆಯನ್ನು ನೀಡಲಾಗುವುದು ಎಂದು ಛತ್ತೀಸ್ಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಘೋಷಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಬಘೇಲ್, ಏಪ್ರಿಲ್ 1ರಿಂದಲೇ ಈ ಯೋಜನೆ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ. ನಮ್ಮ ಸರ್ಕಾರವು ಯುವ ಸಮುದಾಯದ ಪರವಾಗಿದ್ದು, ಈ ನಿರುದ್ಯೋಗ ಭತ್ಯೆಯು ಯುವಕರ ಸ್ವಾವಲಂಬನೆಯ ದಿಕ್ಕಿನಲ್ಲಿ ಹೊಸ ಮೈಲಿಗಲ್ಲು ಆಗಿರಲಿದೆ ಎಂದು ಹೇಳಿದ್ದಾರೆ.