ಸಿಲಿಕಾನ್ ವ್ಯಾಲಿ ಬ್ಯಾಂಕ್ ಪತನದ ಬೆನ್ನಲ್ಲೇ ಅಮೆರಿಕದಲ್ಲಿ ಸಿಗ್ನೇಚರ್ ಬ್ಯಾಂಕ್ ಎಂಬ ಮತ್ತೊಂದು ಬ್ಯಾಂಕ್ ಪತನಗೊಂಡಿದೆ. ದೇಶದ ಬ್ಯಾಂಕಿಂಗ್ ವಲಯವನ್ನೇ ತಲ್ಲಣಗೊಳಿಸಬಹುದಾದ ಈ ಬೆಳವಣಿಗೆ ಕುರಿತು ಸುಳಿವು ಪಡೆದ ಫೆಡರಲ್ ಡೆಪಾಸಿಟ್ ಇನ್ಶೂರೆನ್ಸ್ ಕಾರ್ಪೊರೇಷನ್ ಈ ಬ್ಯಾಂಕನ್ನು ವಶಪಡಿಸಿಕೊಂಡಿದೆ. ಜೊತೆಗೆ ಸಿಗ್ನೇಚರ್ ಬ್ರಿಡ್ಜ್ ಬ್ಯಾಂಕ್ ಎಂಬ ಹೊಸ ಬ್ಯಾಂಕ್ ಸ್ಥಾಪಿಸಿ ಹಳೆಯ ಬ್ಯಾಂಕ್‌ನ ಎಲ್ಲಾ ಆಸ್ತಿ, ಠೇವಣಿಯನ್ನು ಅದಕ್ಕೆ ವರ್ಗಾಯಿಸಿದೆ. ಈ ಹಿನ್ನೆಲೆಯಲ್ಲಿ ಸಿಗ್ನೇಚರ್ ಬ್ಯಾಂಕ್‌ನ ಷೇರುಗಳು ಕುಸಿತ ಕಂಡಿದೆ..