ನವದೆಹಲಿ: ನೋಟು ನಿಷೇಧವಾದ ಬಳಿಕ ಎಟಿಎಂ ಬಳಕೆ ಮೇಲೆ ಹಲವು ನಿರ್ಬಂಧಗಳಿವೆ. ಇದಕ್ಕೆ ಸೇರ್ಪಡೆಯೆಂಬಂತೆ ಮುಂದಿನ ವರ್ಷದಿಂದ ಹೊಸ ನಿಯಮ ಜಾರಿಯಾಗುವ ಸಾಧ್ಯತೆಯಿದೆ.
ಮುಂದಿನ ವರ್ಷದಿಂದ ಎಟಿಎಂಗಳಲ್ಲಿ ರಾತ್ರಿ 9 ಗಂಟೆಯ ಬಳಿಕ ಹಣ ಖಾಲಿಯಾದರೆ ಮತ್ತೆ ತುಂಬದೇ ಇರಲು ಗೃಹ ಸಚಿವಾಲಯ ಚಿಂತನೆ ನಡೆಸಿದೆ.
ಭದ್ರತಾ ಕಾರಣಗಳಿಂದ ಈ ನಿಯಮ ಜಾರಿಗೆ ತರಲು ಗೃಹ ಸಚಿವಾಲಯ ನಿರ್ಧರಿಸಿದೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸಂಜೆ 4 ಗಂಟೆಯೊಳಗೆ ಹಣ ತುಂಬಬೇಕು. ಉಳಿದೆಡೆ ರಾತ್ರಿ 9 ಗಂಟೆಯೊಳಗೆ ಹಣ ಭರ್ತಿ ಮಾಡುವ ಸಂಸ್ಥೆಗಳು ಬ್ಯಾಂಕ್ ಗಳಿಂದ ಮಧ್ಯಾಹ್ನದ ಒಳಗೆ ಹಣ ಪಡೆದು ಆಯಾ ಎಟಿಎಂಗಳಿಗೆ ತುಂಬಬೇಕು ಎಂದು ಗೃಹ ಸಚಿವಾಲಯ ನಿರ್ದೇಶನ ನೀಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.