Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪ್ರವಾಹದ ಬಳಿಕ ಮತ್ತೊಂದು ಭೀತಿಯಲ್ಲಿ ನಿರಾಶ್ರಿತರು

ಪ್ರವಾಹದ ಬಳಿಕ ಮತ್ತೊಂದು ಭೀತಿಯಲ್ಲಿ ನಿರಾಶ್ರಿತರು
ತಿರುವನಂತಪುರಂ , ಸೋಮವಾರ, 20 ಆಗಸ್ಟ್ 2018 (09:16 IST)
ತಿರುವನಂತಪುರಂ: ಕೇರಳ ಮತ್ತು ಕೊಡಗಿನಲ್ಲಿ ಭಾರೀ ಮಳೆಯಿಂದಾಗಿ ಸಾವಿರಾರು ಜನರ ಬದುಕು ದುಸ್ತರವಾಗಿದೆ. ಮನೆ ಮಠ ಕಳೆದುಕೊಂಡು ನಿರಾಶ್ರಿತರ ಕೇಂದ್ರ ಸೇರಿದ್ದಾರೆ.

ಕೇರಳದಲ್ಲಿ ಸದ್ಯಕ್ಕೆ ವರುಣ ಕೊಂಚ ಬಿಡುವು ತೋರಿದರೂ ಮತ್ತೊಂದು ಭೀತಿ ನಿರಾಶ್ರಿತರ ಶಿಬಿರದಲ್ಲಿರುವ ಸಂತ್ರಸ್ತರನ್ನು ಕಾಡುತ್ತಿದೆ. ಅದು ಸಾಂಕ್ರಾಮಿಕ ರೋಗದ ಭೀತಿ.

ಸಾಮಾನ್ಯವಾಗಿ ಪ್ರವಾಹದ ನಂತರ ಜನರು ಸಂಕಷ್ಟಕ್ಕೀಡಾಗುವುದು ಇದೇ ಕಾರಣಕ್ಕೆ. ಇದೀಗ ಕೇರಳದ ನಿರಾಶ್ರಿತರ ಶಿಬಿರದಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಶುರುವಾಗಿದೆ. ಕೆಲವೆಡೆ ಚಿಕನ್ ಪಾಕ್ಸ್ ನಂತಹ ಹರಡುವ ಖಾಯಿಲೆ ಹೊಂದಿದವರು ಇದ್ದಾರೆ. ಇದರಿಂದಾಗಿ ಉಳಿದವರಿಗೂ ಇಂತಹ ಗಂಭೀರ ಖಾಯಿಲೆಗಳು ಹರಡುವ ಅಪಾಯ ಎದುರಾಗಿದೆ.

ಅದಲ್ಲದೆ, ನೀರು, ಗಾಳಿಯಿಂದ ಹರಡುವ ಇತರ ಸಾಂಕ್ರಾಮಿಕ ರೋಗಗಳ ಭೀತಿ ಕೇರಳದಲ್ಲಿ ಮನೆ ಮಾಡಿದೆ. ಈಗಾಗಲೇ ವೈದ್ಯರ ತಂಡ ಪ್ರವಾಹ ಪೀಡಿತರಿಗಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೂ, ಮಳೆಯಿಂದಾಗಿ ಕೊಚ್ಚೆಯಂತಾಗಿರುವ ಪರಿಸರದಿಂದ ರೋಗದ ಭೀತಿ ಹೆಚ್ಚಾಗಿದೆ. ಪರಿಸ್ಥಿತಿ ಸುಧಾರಿಸಲು ಇನ್ನೆಷ್ಟು ದಿನಗಳು ಬೇಕೋ?!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಕೇರಳ ಪ್ರವಾಹ: ನಿರಾಶ್ರಿತರ ಕೇಂದ್ರದಲ್ಲಿರುವಾಗಲೇ ನಡೆಯಿತು ಮದುವೆ!