ಮುಂಬೈ: ರಿಲಯನ್ಸ್ ಸಂಸ್ಥೆ ಅಗ್ಗದ ದರದಲ್ಲಿ ಜಿಯೋ 4 ಜಿ ಫೋನ್ ಗಳನ್ನು ನೀಡುವುದಾಗಿ ಘೋಷಿಸಿದ ಮೇಲೆ ಅದನ್ನು ಕೊಳ್ಳಲು ಹಲವರು ಆಸಕ್ತಿ ವಹಿಸಿದ್ದಾರೆ. ಜಿಯೋ ಫೋನ್ ಬುಕಿಂಗ್ ಆರಂಭವಾಗಿದ್ದು, ಎಸ್ ಎಂಎಸ್ ಮೂಲಕವೂ ಬುಕ್ ಮಾಡಿಕೊಳ್ಳಬಹುದು.
ಅದು ಹೇಗೆ? ಅಂತೀರಾ? ಎಲ್ಲರಿಗೂ ರಿಲಯನ್ಸ್ ಮಳಿಗೆಗೆ ಹೋಗಲು ಸಾಧ್ಯವಿರುವುದಿಲ್ಲ ಅಥವಾ ಆನ್ ಲೈನ್ ಮೂಲಕ ಬುಕಿಂಗ್ ಮಾಡುವ ವಿಧಾನ ತಿಳಿದಿರುವುದಿಲ್ಲ. ಅಂತಹವರು ಎಸ್ ಎಂಎಸ್ ಮೂಲಕ ಬುಕಿಂಗ್ ಮಾಡಬಹುದು.
ಅದಕ್ಕೆ ಮಾಡಬೇಕಿರುವುದು ಇಷ್ಟೇ. ನಿಮ್ಮ ಫೋನ್ ನಲ್ಲಿ ಆಂಗ್ಲ ಭಾಷೆಯಲ್ಲಿ JP ಎಂದು ಟೈಪ್ ಮಾಡಿ. ನಂತರ ಒಂದು ಸ್ಪೇಸ್ ಕೊಟ್ಟು ನಿಮ್ಮ ಏರಿಯಾದ ಪಿನ್ ಕೋಡ್ ನಮೂದಿಸಿ. ಮತ್ತೊಮ್ಮೆ ಸ್ಪೇಸ್ ಕೊಟ್ಟು ನಿಮ್ಮ ಹತ್ತಿರದ ಜಿಯೋ ಮಳಿಗೆಯ ಕೋಡ್ ಸಂಖ್ಯೆ ನಮೂದಿಸಿ 7021170211 ಗೆ ಕಳುಹಿಸಿ. ನೀವು ಬುಕಿಂಗ್ ಮಾಡಿರುವ ಫೋನ್ ನಿಮ್ಮ ಕೈತಲುಪುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ