ನವದೆಹಲಿ: ದೇಶದಲ್ಲಿ ಹೊಸ ಟೆಲಿಕಾಂ ಕ್ರಾಂತಿಗೆ ರಿಲಯನ್ಸ್ ಜಿಯೋ ಕಾರಣವಾಗಿದ್ದೇ ತಡ. ಎಲ್ಲಾ ಟೆಲಿಕಾಂ ಸಂಸ್ಥೆಯ ಯೋಜನೆಗಳು ಗ್ರಾಹಕರಿಗೆ ಕೈಗುಟುಕುವ ಹಾಗಿದೆ. ಇದೀಗ ಜಿಯೋ ಫೋನ್ ಘೋಷಣೆಯಾದ ಬೆನ್ನಲ್ಲೇ ವೊಡಾಫೋನ್ ಪೈಪೋಟಿಗಿಳಿದಿದೆ.
ವೊಡಾಫೋನ್ ಇದೀಗ ತನ್ನ ಗ್ರಾಹಕರಿಗೆ 70 ಜಿಬಿ 4 ಜಿ ಉಚಿತ ಡಾಟಾ ಹಾಗೂ ಉಚಿತ ಕರೆಗಳ ಬಂಪರ್ ಆಫರ್ ನೀಡಿದೆ. ಈ ಆಫರ್ 70 ದಿನಗಳ ವ್ಯಾಲಿಡಿಟಿಯನ್ನು ಹೊಂದಲಿದೆ. ಇದಕ್ಕೆ ಕೇವಲ 244 ರೂ. ಪಾವತಿಸಿದರೆ ಸಾಕು.
ರಿಲಯನ್ಸ್ ಜಿಯೋ ಫೋನ್ ಘೋಷಿಸಿದಾಗಲೇ ಇತರ ಟೆಲಿಕಾಂ ಸಂಸ್ಥೆಗಳಿಂದ ಮತ್ತಷ್ಟು ಆಫರ್ ಗಳನ್ನು ಗ್ರಾಹಕರು ನಿರೀಕ್ಷಿಸಿದ್ದರು, ಅದೀಗ ನಿಜವಾಗುತ್ತಿದೆ. 70 ಜಿಬಿ ಅಂದರೆ ದಿನವೊಂದಕ್ಕೆ 1 ಜಿಬಿ 4 ಜಿ ಡಾಟಾ ಗ್ರಾಹಕರು ಬಳಸಬಹುದಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ