ಬೆಂಗಳೂರು : ಮೊಬೈಲ್ ಬ್ಯಾಂಕಿಂಗ್ ಸೌಲಭ್ಯದ ಮೂಲಕ ಬ್ಯಾಂಕಿಂಗ್ ವ್ಯವಹಾರ ಸುಲಭಗೊಳಿಸಲು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಮುಂದಾಗಿದ್ದು, ಈ ಮೂಲಕ ಕುಳಿತ ಕಡೆಯಲ್ಲೇ ಮೊಬೈಲ್ ನಿಂದ ಮಿಸ್ಡ್ ಕಾಲ್ ಅಥವಾ ಎಸ್‌ಎಂಎಸ್ ಮಾಡಿ ಬ್ಯಾಂಕ್ ಬ್ಯಾಲೆನ್ಸ್ ವಿವರ ಹಾಗೂ ಚೆಕ್ ಪಾವತಿಯನ್ನು ತಡೆ ಹಿಡಿಯಬಹುದಾಗಿದೆ.
ನೋಂದಾಯಿತ ಗ್ರಾಹಕರಿಗೆ ಎಸ್ ಎಂ ಎಸ್ ಸೇವೆ ಲಭ್ಯವಾಗಲಿದೆ. ಗ್ರಾಹಕರು ಎಸ್ ಬಿ ಐ ಯಾವುದೇ ಶಾಖೆಗೆ ಹೋಗಿ ಬ್ಯಾಂಕ್ ಅಕೌಂಟ್ ಜೊತೆ ನಿಮ್ಮ ಮೊಬೈಲ್ ನಂಬರ್ ನೀಡಿ ನೋಂದಣಿ ಮಾಡಬಹುದಾಗಿದೆ.
ನಿಮ್ಮ ಖಾತೆಯ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಲು 09223766666 ನಂಬರ್ ಗೆ ಮಿಸ್ಡ್ ಕಾಲ್ ನೀಡಿ. ಇಲ್ಲವೆ BAL ಎಂದು ಟೈಪ್ ಮಾಡಿ 09223766666 ನಂಬರ್ ಗೆ ಎಸ್‌ಎಂಎಸ್ ಮಾಡಬಹುದಾಗಿದೆ. ಕೆಲವೇ ಕ್ಷಣಗಳಲ್ಲಿ ಬ್ಯಾಂಕ್ ಬ್ಯಾಲೆನ್ಸ್ ವಿವರ ಸಿಗಲಿದೆ.
09223866666 ನಂಬರ್ ಗೆ ಮಿಸ್ಡ್ ಕಾಲ್ ನೀಡಿ ಅಥವಾ MSTMT ಎಂದು ಈ 09223866666 ನಂಬರ್ ಗೆ ಎಸ್ ಎಂಎಸ್ ಮಾಡಿದ್ರೆ ಎಟಿಎಂನಲ್ಲಿ ನೀವು ಮಾಡಿದ ಐದು ವಹಿವಾಟಿನ ವಿವರ ಸಿಗಲಿದೆ. ಎಟಿಎಂ ಕಾರ್ಡ್ ಲಾಕ್ ಮಾಡಲು BLOCKXXXX' to 567676 ಗೆ ಸಂದೇಶ ಕಳುಹಿಸಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ