ಕೈರೋ : ಈಜಿಪ್ಟ್ ರಾಜಧಾನಿ ಕೈರೋದ ಮೃಗಾಲಯವೊಂದು ಕತ್ತೆಗಳನ್ನು ಝೀಬ್ರಾದಂತೆ ಪ್ರದರ್ಶಿಸಿ ಅಪಹಾಸ್ಯಕ್ಕೀಡಾಗಿದೆ.
ಹೌದು. ಈ ಮೃಗಾಲಯ ಕತ್ತೆಗಳು ಝೀಬ್ರಾದಂತೆ ಕಾಣಲು ಅವುಗಳಿಗೆ ಕಪ್ಪು ಪಟ್ಟಿಗಳನ್ನು ಬಳಿದಿತ್ತು. ಇಂಟರ್‌ನ್ಯಾಶನಲ್ ಗಾರ್ಡನ್ ಮುನಿಸಿಪಲ್ ಉದ್ಯಾನವನದಲ್ಲಿ ಚೂಪಾದ ಕಿವಿಗಳೊಂದಿಗೆ ವಿಚಿತ್ರವಾಗಿ ಕಾಣುತ್ತಿದ್ದ ಎರಡು ಝೀಬ್ರಾಗಳನ್ನು ಮಹ್ಮೂದ್ ಸರ್ಹಾನ್ ಎಂಬ ವಿದ್ಯಾರ್ಥಿಯೊಬ್ಬರು ಗಮನಿಸಿದರು.
ಆ ವೇಳೆ ವಾತಾವರಣದ ಬಿಸಿಗೆ ಆ ಪ್ರಾಣಿಗಳಿಗೆ ಬಳಿಯಲಾಗಿದ್ದ ಕಪ್ಪು ಬಣ್ಣವು ಹರಡಲು ಆರಂಭಿಸಿತ್ತು. ಇದರಿಂದ ಸಂಶಯಗೊಂಡ ಆ ವಿದ್ಯಾರ್ಥಿ ಅವುಗಳ ಫೋಟೋ ತೆಗೆದು ಫೇಸ್‌ಬುಕ್‌ನಲ್ಲಿ ಹಾಕಿದರು. ಅದು ತಕ್ಷಣವೇ ವೈರಲ್ ಆಯಿತು.
ಆದರೆ ವಿದ್ಯಾರ್ಥಿ ಸರ್ಹಾನ್ ನೋಡಿದ ಪ್ರಾಣಿಗಳು ನಿಜವಾದ ಝೀಬ್ರಾಗಳು ಎಂಬುದಾಗಿ ಪ್ರಾಣಿ ಸಂಗ್ರಹಾಲಯದ ನಿರ್ದೇಶಕ ಮುಹಮ್ಮದ್ ಸುಲ್ತಾನ್ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ