ನವದೆಹಲಿ : ಗೃಹ ಬಳಕೆ ಸಬ್ಸಿಡಿ ಸಹಿತ ಅಡುಗೆ ಅನಿಲ ಸಿಲಿಂಡರ್ ದರ ಇಳಿಕೆ ಮಾಡುವುದರ ಮೂಲಕ ಕೇಂದ್ರ ಸರ್ಕಾರ ಹೊಸ ವರ್ಷಕ್ಕೆ ಜನರಿಗೆ ಭರ್ಜರಿ ಉಡುಗೊರೆ ನೀಡಿದೆ.
ಹೌದು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್ ಪಿಜಿ ಅನಿಲದ ಬೆಲೆ ಇಳಿಕೆಯಾಗಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಗೃಹ ಬಳಕೆ ಸಬ್ಸಿಡಿ ಸಹಿತ ಅಡುಗೆ ಅನಿಲ ಸಿಲಿಂಡರ್ ದರ 5.91 ರೂ. ಇಳಿಕೆ ಮಾಡಿದೆ. ನಿನ್ನೇ ಮಧ್ಯರಾತ್ರಿಯಿಂದಲೇ ಪರಿಷೃತ ದರ ಜಾರಿ ಬರಲಿದ್ದು, ದೆಹಲಿಯಲ್ಲಿ 500.90 ರೂ. ಇದ್ದ 14.2 ಕೆಜಿ ಸಬ್ಸಿಡಿ ಸಿಲಿಂಡರ್ ಬೆಲೆ ದರ ಕಡಿತದಿಂದ 494.99 ರೂ. ಆಗಲಿದೆ.
ಇದರೊಂದಿಗೆ ಜನವರಿ ತಿಂಗಳಿನಲ್ಲಿ ಸಬ್ಸಿಡಿ ಸಿಲಿಂಡರ್ ಪಡೆಯುವ ಗ್ರಾಹಕರ ಖಾತೆಗೆ ಪ್ರತಿ ಸಿಲಿಂಡರ್ ಗೆ 94.01 ರೂ. ಜಮೆ ಆಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.