Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಿಲಯನ್ಸ್ ಜಿಯೋ ಫೋನ್ ಬುಕ್ಕಿಂಗ್ ಇಂದಿನಿಂದ ಆರಂಭ.. ಬುಕ್ ಮಾಡುವುದು ಹೇಗೆ ಗೊತ್ತಾ..?

ರಿಲಯನ್ಸ್ ಜಿಯೋ ಫೋನ್ ಬುಕ್ಕಿಂಗ್ ಇಂದಿನಿಂದ ಆರಂಭ.. ಬುಕ್ ಮಾಡುವುದು ಹೇಗೆ ಗೊತ್ತಾ..?
ಮುಂಬೈ , ಗುರುವಾರ, 24 ಆಗಸ್ಟ್ 2017 (12:24 IST)
ರಿಲಯನ್ಸ್ ಕಂಪನಿ ಮುಖ್ಯಸ್ಥ ಮುಖೇಶ್ ಅಂಬಾನಿ ಜುಲೈ 21ರಂದು ಕಂಪನಿಯ 40ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಗ್ಗದ ಜಿಯೋ ಸ್ಮಾರ್ಟ್ ಫೋನ್ ಘೋಷಿಸಿದ್ದರು. ಅಂದರೆ, 1500 ರೂ. ಡೆಪಾಸಿಟ್`ನೊಂದಿಗೆ ಉಚಿತ ಮೊಬೈಲ್ ಫೋನ್ ಇದಾಗಿದ್ದು, ಇವತ್ತಿನಿಂದ ಪ್ರೀಬುಕ್ಕಿಂಗ್ ಶುರುವಾಗಿದೆ.

ಸಂಜೆ 5.30ರ ಬಳಿಕ ಜಿಯೋ 4ಜಿ ಮೊಬೈಲ್ ಬುಕ್ಕಿಂಗ್ ಶುರುವಾಗಲಿದ್ದು,ಗ್ರಾಹಕರು ಆನ್`ಲೈನ್ ಅಥವಾ ಮೊಬೈಲ್ ಸ್ಟೋರ್`ಗಳಲ್ಲಿ ಬುಕ್ಕಿಂಗ್ ಮಾಡಬಹುದು. ಜಿಯೋ ಫೋನ್ ಬೇಡಿಎಕ ಪರೀಕ್ಷಿಸಲು ಕಳೆದ ಕೆಲ ದಿನಗಳ ಹಿಂದೆಯೇ ಸಂಸ್ಥೆ `ರಿಜಿಸ್ಟರ್ಡ್ ಇಂಟರೆಸ್ಟ್’ ಶುರು ಮಾಡಿದೆ. ಆನ್`ಲೈನ್ ಮತ್ತು ಆಫ್ ಲೈನ್`ಗಳಲ್ಲೂ `ರಿಜಿಸ್ಟರ್ಡ್ ಇಂಟರೆಸ್ಟ್’ನಲ್ಲಿ ಸೈನ್ ಇನ್ ಮಾಡಬಹುದುದಾಗಿದೆ. ಇದರಲ್ಲಿ ಸೈನ್ ಇನ್ ಆದವರಿಗೆ ಮಾತ್ರ ಮೊಬೈಲ್ ಬುಕ್ ಮಾಡುವ ಅವಕಾಶ ಸಿಗಲಿದೆ.

ಆನ್`ಲೈನ್ ಬುಕ್ಕಿಂಗ್ ಹೇಗೆ..?: ಮೈ ಜಿಯೋ ಆಪ್ ಮತ್ತು ಕಂಪನಿಯ ಅಧಿಕೃತ ವೆಬ್ ಸೈಟ್ ಮೂಲಕ  ಜಿಯೋ ಫೋನ್ ಆನ್`ಲೈನ್ ಬುಕ್ಕಿಂಗ್ ಮಾಡಬಹುದಾಗಿದೆ. ಜಿಯೋ ಫೋನ್ ಬುಕ್ಕಿಂಗ್`ಗಾಗಿಯೇ ಸಂಸ್ಥೆ ಒಂದು ವಿಶೇಷ್ ಪೇಜ್ ಆರಂಭಿಸಿದೆ. ಸಂಜೆ 5.30ರ ಬಳಿಕ ಲಾಗಿನ್ ಆಗಿ ಬುಕ್ ಮಾಡಬಹುದು.

ಆಫ್ ಲೈನ್ ಬುಕ್ಕಿಂಗ್ ಹೇಗೆ..?: ಜಿಯೋ ಸಗಟು ವ್ಯಾಪಾರಸ್ಥರ ಬಳಿ ಆಫ್ ಲೈನ್ ಜಿಯೋ ಫೋನ್ ಬುಕ್ ಮಾಡಬಹುದು. ಮಲ್ಟಿ ಬ್ರಾಂಡ್ ರೀಟೈಲರ್ ಶಾಪ್ ರಿಲಯನ್ಸ್ ಡಿಜಿಟಲ್`ನಲ್ಲೂ ಫೋನ್ ಬುಕ್ ಮಾಡಬಹುದು.  ಜಿಯೋ ಪಿಓಎಸ್ ವರ್ಶನ್ ಅಪ್ಡೇಟ್ ಮಾಡಿಕೊಂಡಿರುವ ಡಿಲಯನ್ಸ್ ಡಿಜಿಟಲ್ ಸ್ಟೋರ್`ಗಳಲ್ಲಿ ಮಾತ್ರ ಪ್ರೀಬುಕ್ಕಿಂಗ್ ಮಾಡಬಹುದು.

ಎಷ್ಟು ಹಣ ಪಾವತಿಸಬೇಕು..?: ಜಿಯೋ ಫೋನ್ ಉಚಿತವಾದರೂ ಅದನ್ನ ಪಡೆಯಲು ಮೊದಲೇ ರೀಫಂಡಬಲ್ ಭದ್ರತಾ ಠೇವಣಿ 1500 ರೂ. ಪಾವತಿಸಬೇಕು. ಬುಕ್ ಮಾಡುವಾಗ ಗ್ರಾಹಕರು 500 ರೂ. ಪಾವತಿಸಬೇಕು. ಬುಕ್ಕಿಂಗ್ ಸಂದರ್ಭ ದುರುಪಯೋಗ ತಪ್ಪಿಸಲು ಸಂಸ್ಥೆ ಈ ಹಣ ಪಡೆಯುತ್ತಿದೆ. ಮೊಬೈಲ್ ಡೆಲಿವರಿ ಸಂದರ್ಭ ಈ ಹಣವನ್ನ ನೀವು ಪಾವತಿಸುವ ಡೆಪಾಸಿಟ್ ಹಣದಲ್ಲಿ ಕಡಿತಗೊಳಿಸಲಾಗುತ್ತೆ. ಡೆಲಿವರಿ ವೇಳೆ ನೀಡು 1000 ರೂ. ಮಾತ್ರ ಪಾವತಿಸಬಹುದಾಗಿದೆ.

ಜಿಯೋ ಪೋನ್ ಪಡೆದ ಬಳಿಕ ನೀವು ಜಿಯೋ ಪ್ಲ್ಯಾನ್ ಸಬ್`ಸ್ಕ್ರೈಬ್ ಮಾಡಬೇಕು. ಮಾಸಿಕ ಜಿಯೋ ಪ್ಲ್ಯಾನ್ 153 ರೂ.ನಿಂದ ಆರಂಭವಾಗಲಿದೆ. 53 ರೂ.ನ ವಾರದ ಪ್ಲ್ಯಾನ್ ಕೂಡ ಇದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ತಮ್ಮ ದೇಶಕ್ಕೆ ಭೇಟಿ ನೀಡುವುದು ಚೀನಾಗೆ ಇಷ್ಟವಿಲ್ಲ?