ನವದೆಹಲಿ : ಬಿ.ಎಸ್.ಎನ್.ಎಲ್. ಇತ್ತೀಚೆಗೆ ಪರಿಚಯಿಸಿದ ಅಭಿನಂದನ್ ಎಂಬ ಪ್ರೀಪೇಯ್ಡ್ ಪ್ಲ್ಯಾನ್ ನ್ನು ಇದೀಗ ಪರಿಷ್ಕರಿಸಿದ್ದು, ಇದರಲ್ಲಿ ಈಗ ಹೆಚ್ಚುವರಿ ಡೇಟಾ ಸಿಗಲಿದೆ.
ಬಿ.ಎಸ್.ಎನ್.ಎಲ್. ಇತ್ತೀಚೆಗೆ ಅಭಿನಂದನ್ ಪ್ರೀಪೇಯ್ಡ್ ಪ್ಲ್ಯಾನ್ ಯೋಜನೆಯನ್ನು ಪರಿಚಯಿಸಿದ್ದು, 151ರೂ.ಗಳ ಈ ಪ್ಲ್ಯಾನ್ ನಲ್ಲಿ ಅನಿಯಮಿತ ಕರೆಗಳು, ಪ್ರತಿದಿನ 1 ಜಿಬಿ ಡೇಟಾ (ಇಂಟರ್ನೆಟ್) ಹಾಗೂ 24 ದಿನಗಳಿಗೆ ದಿನಕ್ಕೆ 100 ಎಸ್ಸೆಮ್ಮೆಸ್ ಉಚಿತವಾಗಿ ದೊರೆಯುತ್ತಿದ್ದವು. ಇದು 24 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.
ಆದರೆ ಇದೀಗ ಈ ಯೋಜನೆಯನ್ನು ಪರಿಷ್ಕರಿಸಿದ ಬಿ.ಎಸ್.ಎನ್.ಎಲ್., ಹೆಚ್ಚುವರಿ ಇಂಟರ್ನೆಟ್ ಸೌಕರ್ಯ ನೀಡಲಿದೆ. ಅಂದರೆ ದಿನಕ್ಕೆ 1.5 ಜಿಬಿ ಡೇಟಾ ದೊರೆಯಲಿದೆ. ದಿನಕ್ಕೆ 1.5 ಜಿಬಿ ಎಂದರೆ 24 ದಿನಗಳ ವ್ಯಾಲಿಡಿಟಿ ಅವಧಿಗೆ ಒಟ್ಟು 36 ಜಿಬಿ ದೊರೆತಂತಾಯಿತು. ದಿನದ 1.5 ಜಿಬಿ ಕೋಟಾ ಮುಗಿದರೆ, ಬಿಎಸ್ಸೆನ್ನೆಲ್ ಇಂಟರ್ನೆಟ್ ಸ್ಪೀಡ್ 40kbps ಗೆ ಇಳಿಯುತ್ತದೆ.
ಜೂ.13ರಿಂದ ಆರಂಭವಾದ ಈ ಯೋಜನೆಯು ಅಂದಿನಿಂದ 90 ದಿನಗಳ ಕಾಲ ಲಭ್ಯ ಇರುತ್ತದೆ. ಅಭಿನಂದನ್ ಪ್ಲ್ಯಾನ್ ನ ವ್ಯಾಲಿಡಿಟಿ 180 ದಿನಗಳ ಕಾಲ ಇರುತ್ತದೆಯಾದರೂ, ಯೋಜನೆಯ ಪ್ರಯೋಜನಗಳು ಸಿಗುವುದು 24 ದಿನಗಳ ಕಾಲ ಮಾತ್ರ.