ಮೊಹಾಲಿ: ಈ ವರ್ಷದ ಐಪಿಎಲ್ ಆವೃತ್ತಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತವರಿನ ಯುವರಾಜ್ ಸಿಂಗ್ ರನ್ನು ಕಡೆಗಣಿಸಿ ತಮಿಳುನಾಡು ಮೂಲದ ರವಿಚಂದ್ರನ್ ಅಶ್ವಿನ್ ಗೆ ನಾಯಕತ್ವ ನೀಡಿದ್ದೇಕೆ ಎಂಬ ಪ್ರಶ್ನೆಗೆ ಸ್ವತಃ ಮೆಂಟರ್ ಸೆಹ್ವಾಗ್ ಉತ್ತರಿಸಿದ್ದಾರೆ.
‘ನಾನು ಯಾವತ್ತೂ ಒಬ್ಬ ಬೌಲರ್ ನನ್ನು ನಾಯಕ ಮಾಡಬೇಕೆಂದು ಬಯಸಿದ್ದೆ. ಒಬ್ಬ ಬೌಲರ್ ಬೆಸ್ಟ್ ಕ್ಯಾಪ್ಟನ್ ಆಗಬಲ್ಲ. ವಾಸಿಂ ಅಕ್ರಂ, ಕಪಿಲ್ ದೇವ್ ಮುಂತಾದ ಘಟಾನುಘಟಿ ಬೌಲರ್ ಕಮ್ ನಾಯಕರ ಅಭಿಮಾನಿ ನಾನು’ ಎಂದು ವೀರೂ ಹೇಳಿದ್ದಾರೆ. ಅದೇ ಕಾರಣಕ್ಕೆ ಅಶ್ವಿನ್ ಗೆ ಮಣೆ ಹಾಕಲಾಯಿತು ಎಂದಿದ್ದಾರೆ.
ಯುವರಾಜ್ ಸಿಂಗ್ ಕೂಡಾ ಪಂಜಾಬ್ ನಾಯಕತ್ವದ ರೇಸ್ ನಲ್ಲಿದ್ದರು. ಆದರೆ ಅತೀ ಹೆಚ್ಚು ವೋಟ್ ಸಿಕ್ಕಿದ್ದು ಅಶ್ವಿನ್ ಗೆ. ಅದಕ್ಕೇ ಅವರು ನಾಯಕರಾದರು ಎಂದಿದ್ದಾರೆ ಸೆಹ್ವಾಗ್.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ