ನವದೆಹಲಿ: ಈ ವರ್ಷದ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಟೀಂ ಇಂಡಿಯಾ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ನಾಯಕರಾಗಲಿದ್ದಾರೆ.
ರವಿಚಂದ್ರನ್ ಅಶ್ವಿನ್ 7 ಕೋಟಿ ರೂ.ಗೆ ಈ ಬಾರಿ ಪಂಜಾಬ್ ತಂಡದ ಪಾಲಾಗಿದ್ದರು. ಕನ್ನಡಿಗ ಕರಣ್ ನಾಯರ್, ಮನೋಜ್ ತಿವಾರಿ, ಮಿಚೆಲ್ ಜಾನ್ಸನ್, ಕ್ರಿಸ್ ಗೇಲ್ ಮುಂತಾದ ಘಟಾನುಘಟಿ ನಾಯಕರು ಪಂಜಾಬ್ ಪರ ಆಡುತ್ತಿದ್ದಾರೆ.
ಕಳೆದ ವರ್ಷ ಗ್ಲೆನ್ ಮ್ಯಾಕ್ಸ್ ವೆಲ್ ಪಂಜಾಬ್ ನಾಯಕರಾಗಿದ್ದರು. ಇದುವರೆಗೆ ತಮಿಳುನಾಡು ತಂಡದ ಹೊರತಾಗಿ ಯಾವುದೇ ನಾಯಕತ್ವದ ಜವಾಬ್ದಾರಿ ಹೊರದ ಅಶ್ವಿನ್ ಗೆ ಇದು ಹೊಸ ಅನುಭವವಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ