Select Your Language

Notifications

webdunia
webdunia
webdunia
webdunia

ಸುರೇಶ್ ರೈನಾ ಬಗ್ಗೆ ಹೇಳಿಕೆ ನೀಡಿ ಉಲ್ಟಾ ಹೊಡೆದ ಚೆನ್ನೈ ಮಾಲಿಕ ಎನ್ ಶ್ರೀನಿವಾಸನ್

ಸುರೇಶ್ ರೈನಾ
ಚೆನ್ನೈ: ಸುರೇಶ್ ರೈನಾ ವೈಯಕ್ತಿಕ ಕಾರಣ ನೀಡಿ ಐಪಿಎಲ್ 13 ರಿಂದ ಹೊರಬರುತ್ತಿದ್ದಂತೇ ಅವರ ಬಗ್ಗೆ ನಾನಾ ರೀತಿಯ ಊಹಾಪೋಹಗಳು ಹಬ್ಬಿತ್ತು. ಅದಕ್ಕೆ ಪುಷ್ಟಿ ನೀಡಿದ್ದು ಚೆನ್ನೈ ಮಾಲಿಕ ಎನ್ ಶ್ರೀನಿವಾಸನ್ ನೀಡಿದ್ದ ಹೇಳಿಕೆ.


ರೈನಾ ಹೊರ ಹೋಗಿದ್ದರ ಬಗ್ಗೆ ಪರೋಕ್ಷವಾಗಿ ಶ್ರೀನಿವಾಸನ್‍ ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೆ, ಯಶಸ್ಸು ನೆತ್ತಿಗೇರಿದರೆ ಹಿಂದಿನ ಕಾಲದ ನಟರಂತೆ ಆವೇಶ ಹೆಚ್ಚಾಗುತ್ತದೆ ಎಂದು ಟಾಂಗ್ ನೀಡಿದ್ದರು. ಇದಕ್ಕೆ ಟ್ವಿಟರಿಗರು ಭಾರೀ ಟೀಕೆ ಮಾಡಿದ್ದರು. ಇದರ ಬೆನ್ನಲ್ಲೇ ಶ್ರೀನಿವಾಸನ್ ಸ್ಪಷ್ಟನೆ ನೀಡಿದ್ದು, ರೈನಾ ಬಗ್ಗೆ ನನಗೆ ಅಸಮಾಧಾನವಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಅವರಿಗೆ ಯಾವತ್ತಿಗೂ ಚೆನ್ನೈ ತಂಡದ ಬಾಗಿಲು ತೆರೆದಿರುತ್ತದೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೋಷಿಯಲ್ ಮೀಡಿಯಾದಲ್ಲೂ ನಾಪತ್ತೆಯಾದ ಸುರೇಶ್ ರೈನಾ: ಸಿಎಸ್ ಕೆಗೆ ಗುಡ್ ಬೈ?