Select Your Language

Notifications

webdunia
webdunia
webdunia
webdunia

ಸೋಷಿಯಲ್ ಮೀಡಿಯಾದಲ್ಲೂ ನಾಪತ್ತೆಯಾದ ಸುರೇಶ್ ರೈನಾ: ಸಿಎಸ್ ಕೆಗೆ ಗುಡ್ ಬೈ?

ಸುರೇಶ್ ರೈನಾ
ಮುಂಬೈ: ವೈಯಕ್ತಿಕ ಕಾರಣ ನೀಡಿ ಐಪಿಎಲ್ ನಿಂದ ಹೊರಬಿದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸುರೇಶ‍್ ರೈನಾ ಇದೀಗ ಸೋಷಿಯಲ್ ಮೀಡಿಯಾದಲ್ಲೂ ಕಾಣಿಸಿಕೊಂಡಿಲ್ಲ. ಕೆಲವು ಮೂಲಗಳ ಪ್ರಕಾರ ಚೆನ್ನೈ ತಂಡಕ್ಕೇ ಅವರು ಗುಡ್ ಬೈ ಹೇಳಿದ್ದಾರೆ ಎನ್ನಲಾಗಿದೆ.


ಇನ್ ಸ್ಟಾಗ್ರಾಂನಲ್ಲಿ ಸದಾ ತಮ್ಮ ವರ್ಕೌಟ್ ವಿಡಿಯೋಗಳು, ಕ್ರಿಕೆಟ್ ಕುರಿತಾದ ಮಾಹಿತಿಯನ್ನು ಕಾಲ ಕಾಲಕ್ಕೆ ಪ್ರಕಟಿಸುತ್ತಲೇ ಇದ್ದ ರೈನಾ ಐಪಿಎಲ್ ಕೂಟದಿಂದ ಹೊರಬಂದ ಮೇಲೆ ಯಾವುದೇ ಪೋಸ್ಟ್ ಮಾಡಿಲ್ಲ. ತಂಡದಿಂದ ಹೊರಬಂದಿರುವುದಕ್ಕೆ ಸ್ಪಷ್ಟನೆಯನ್ನೂ ನೀಡಿಲ್ಲ.

ಕೆಲವು ಮೂಲಗಳ ಪ್ರಕಾರ ತಂಡದ ಜತೆಗೆ ಸಂಘರ್ಷ ಮಾಡಿಕೊಂಡಿರುವ ರೈನಾ ಇನ್ನು ಮುಂದೆ ಚೆನ್ನೈ ತಂಡಕ್ಕೇ ಗುಡ್ ಬೈ ಹೇಳಲಿದ್ದಾರೆ ಎನ್ನಲಾಗಿದೆ. ಇದಕ್ಕೆ ತಕ್ಕಂತೆ ಚೆನ್ನೈ ಮಾಲಿಕ ಶ್ರೀನಿವಾಸನ್ ಕೂಡಾ ರೈನಾ ಮೇಲೆ ಬಹಿರಂಗವಾಗಿಯೇ ಅಸಮಾಧಾನ ತೋಡಿಕೊಂಡಿದ್ದರು. ಹೀಗಾಗಿ ಮುಂದಿನ ವರ್ಷ ರೈನಾ ಬೇರೆ ತಂಡದ ಪರ ಐಪಿಎಲ್ ಆಡುವ ಸಾಧ‍್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸುರೇಶ್ ರೈನಾ ಮೇಲೆ ಕನಿಷ್ಠ ಕೃತಜ್ಞತೆಯೂ ಇಲ್ಲವಾಯಿತೇಕೆ? ಟ್ವಿಟರಿಗರ ಆಕ್ರೋಶ