Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೊರೊನಾ ಭೀತಿ: ಐಪಿಎಲ್ ನಲ್ಲಿ ಕ್ರಿಕೆಟಿಗರು ಹ್ಯಾಂಡ್ ಶೇಕ್ ಮಾಡಲ್ಲ

ಕೊರೊನಾ ಭೀತಿ: ಐಪಿಎಲ್ ನಲ್ಲಿ ಕ್ರಿಕೆಟಿಗರು ಹ್ಯಾಂಡ್ ಶೇಕ್ ಮಾಡಲ್ಲ
ಮುಂಬೈ , ಶುಕ್ರವಾರ, 6 ಮಾರ್ಚ್ 2020 (12:16 IST)
ಮುಂಬೈ: ಭಾರತದಲ್ಲೂ ಮಹಾಮಾರಿ ಕೊರೋನಾವೈರಸ್ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯ ಐಪಿಎಲ್ ನಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.


ಕೊರೊನಾವೈರಸ್ ಭೀತಿಯಿಂದಾಗಿ ನ್ಯೂಜಿಲೆಂಡ್ ಆಟಗಾರರು ಐಪಿಎಲ್ ಗೆ ಭಾರತಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರ ನಡುವೆ ಬಿಸಿಸಿಐ ಅಧ್ಯಕ್ಷ ಐಪಿಎಲ್ ನಲ್ಲಿ ಕೊರೋನಾವೈರಸ್ ಹರಡುವಿಕೆ ತಡೆಗೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚಿಂತನೆ ನಡೆಸಿದ್ದಾರೆ.

ಅದರಂತೇ ಈ ಬಾರಿ ಐಪಿಎಲ್ ನಲ್ಲಿ ಪಂದ್ಯ ಮುಗಿದ ಬಳಿಕ ಆಟಗಾರರು ಪರಸ್ಪರ ಕೈ ಕುಲುಕುವ ಪದ್ಧತಿಗೆ ತಿಲಾಂಜಲಿ ಇಡುವ ಸಾಧ‍್ಯತೆಯಿದೆ. ಅಷ್ಟೇ ಅಲ್ಲ ಅಭಿಮಾನಿಗಳು ಕೊಡುವ ಮೊಬೈಲ್ ಬಳಸಿ ಸೆಲ್ಫೀ ತೆಗೆಯುವುದನ್ನೂ ನಿರಾಕರಿಸುವ ಸಾಧ್ಯತೆಯಿದೆ. ಅಲ್ಲದೆ, ಅಭಿಮಾನಿಗಳ ಜತೆ ಬೆರೆಯುವುದು, ಕೈ ಕುಲುಕುವುದು ಇತ್ಯಾದಿಗಳಿಗೂ ಬ್ರೇಕ್ ಹಾಕುವ ಸಾಧ‍್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಸೀಸ್ ಕ್ರಿಕೆಟ್ ಆಟಗಾರ್ತಿ ಭಾರತದ ವಿರುದ್ಧ ಆಡುವುದನ್ನು ಧ್ವೇಷಿಸುತ್ತೇನೆ ಎಂದಿದ್ಯಾಕೆ?