Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಆಸೀಸ್ ಕ್ರಿಕೆಟ್ ಆಟಗಾರ್ತಿ ಭಾರತದ ವಿರುದ್ಧ ಆಡುವುದನ್ನು ಧ್ವೇಷಿಸುತ್ತೇನೆ ಎಂದಿದ್ಯಾಕೆ?

ಆಸೀಸ್ ಕ್ರಿಕೆಟ್ ಆಟಗಾರ್ತಿ ಭಾರತದ ವಿರುದ್ಧ ಆಡುವುದನ್ನು ಧ್ವೇಷಿಸುತ್ತೇನೆ ಎಂದಿದ್ಯಾಕೆ?
ಸಿಡ್ನಿ , ಶುಕ್ರವಾರ, 6 ಮಾರ್ಚ್ 2020 (12:05 IST)
ಸಿಡ್ನಿ: ಭಾನುವಾರ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ಆದರೆ ಭಾರತದ ವಿರುದ್ಧ ಕ್ರಿಕೆಟ್ ಆಡುವುದನ್ನು ನಾನು ಸದಾ ಧ್ವೇಷಿಸುತ್ತೇನೆ ಎಂದು ಆಸೀಸ್ ಬೌಲರ್ ಮೇಗನ್ ಶಟ್ ಹೇಳಿದ್ದಾರೆ.


ಅಷ್ಟಕ್ಕೂ ಮೇಗನ್ ಯಾಕೆ ಹೀಗೆ ಹೇಳಿದರು ಗೊತ್ತಾ? ಆಕೆಗೆ ಭಾರತದ ಹೊಡೆಬಡಿಯ ಆಟಗಾರ್ತಿ ಶಿಫಾಲಿ ವರ್ಮ, ಸ್ಮೃತಿ ಮಂಧನ ಸಿಕ್ಸರ್ ಗಳೆಂದರೆ ದುಸ್ವಪ್ನದಂತೆ ಕಾಡುತ್ತದಂತೆ.

‘ಭಾರತದ ವಿರುದ್ಧ ಆಡುವುದನ್ನು ನಾನು ಧ್ವೇಷಿಸುತ್ತೇನೆ. ಅವರು ನನ್ನ ಬೆವರು ಕಿತ್ತು ಬಿಡುತ್ತಾರೆ. ಕಳೆದ ಬಾರಿ ತ್ರಿಕೋನ ಸರಣಿಯಲ್ಲಿ ಶಿಫಾಲಿ ಹೊಡೆದ ಸಿಕ್ಸರ್ ನಷ್ಟು ಉದ್ದದ ಸಿಕ್ಸರ್ ಇದುವರೆಗೆ ಯಾರೂ ಹೊಡೆದಿರಲಿಲ್ಲ’ ಎಂದು ಶಟ್ ಅಲವತ್ತುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿಯ ಆ ಒಂದು ಟ್ವೀಟ್ ನಿಂದ ಅಭಿಮಾನಿಗಳಲ್ಲಿ ಅನುಮಾನ ಶುರು!