Publish Date: Fri, 20 Mar 2020 (09:12 IST)
Updated Date: Fri, 20 Mar 2020 (09:13 IST)
ಮುಂಬೈ: ಈ ವರ್ಷದ ಐಪಿಎಲ್ ಆವೃತ್ತಿ ನಡೆಯುತ್ತದೋ ಇಲ್ಲವೋ ಎಂಬ ಗೊಂದಲಗಳಿಗೆ ಏಪ್ರಿಲ್ 15 ರ ಬಳಿಕ ಉತ್ತರ ಸಿಗಲಿದೆ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಸುಳಿವು ನೀಡಿದ್ದಾರೆ.
‘ಬಿಸಿಸಿಐ ನಮ್ಮ ಅಧೀನದಲ್ಲಿ ಇಲ್ಲ. ಹಾಗಿದ್ದರೂ ಕೊರೋನಾವೈರಸ್ ನಿಂದ ದೇಶದ ನಾಗರಿಕರನ್ನು ರಕ್ಷಿಸಲು ಎಲ್ಲಾ ರೀತಿಯ ಕ್ರೀಡಾ ಕೂಟಗಳನ್ನು ಸದ್ಯಕ್ಕೆ ರದ್ದು ಮಾಡಲಾಗಿದೆ. ಆದರೆ ಏಪ್ರಿಲ್ 15 ರ ಬಳಿಕ ಹೊಸದಾಗಿ ಸೂಚನೆ ನೀಡಲಾಗುವುದು. ಆ ಬಳಿಕ ಐಪಿಎಲ್ ಆಗಲಿ, ಇತರ ಕ್ರೀಡಾ ಕೂಟವಾಗಲಿ ಯಾವಾಗ ನಡೆಸಬೇಕು ಎಂದು ತೀರ್ಮಾನಿಸಬಹುದು’ ಎಂದು ಕಿರಣ್ ರಿಜಿಜು ಹೇಳಿದ್ದಾರೆ.
ಕೆಲವು ಮೂಲಗಳ ಪ್ರಕಾರ ಜುಲೈ-ಸೆಪ್ಟೆಂಬರ್ ನಲ್ಲಿ ಐಪಿಎಲ್ ನಡೆಯಬಹುದು ಎನ್ನಲಾಗುತ್ತಿದೆ. ಆದರೆ ಇದೆಲ್ಲದಕ್ಕೂ ಏಪ್ರಿಲ್ 15 ರ ಬಳಿಕವಷ್ಟೇ ಉತ್ತರ ಸಿಗಲಿದೆ.