Publish Date: Tue, 17 Mar 2020 (11:07 IST)
Updated Date: Tue, 17 Mar 2020 (11:11 IST)
ರಾಂಚಿ: ಐಪಿಎಲ್ ಮುಂದೂಡಿಕೆಯಾದ ಹಿನ್ನಲೆಯಲ್ಲಿ ಚೆನ್ನೈ ಬಿಟ್ಟು ತವರಿಗೆ ತೆರಳಿದ್ದ ಕ್ರಿಕೆಟಿಗ ಧೋನಿ ಈಗ ಜಾಲಿ ಮೂಡ್ ನಲ್ಲಿದ್ದಾರೆ. ತಮ್ಮ ಮೆಚ್ಚಿನ ಬೈಕ್ ರೈಡಿಂಗ್ ಮಾಡಿ ಸುದ್ದಿಯಾಗಿದ್ದಾರೆ.
ಧೋನಿ ಬೈಕ್ ಪ್ರಿಯ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಅವಕಾಶ ಸಿಕ್ಕಾಗಲೆಲ್ಲಾ ಹೆಲ್ಮೆಟ್ ಏರಿಸಿಕೊಂಡು ಬೈಕ್ ರೈಡ್ ಮಾಡುವ ಧೋನಿ ಈಗ ಬಿಡುವಿನ ವೇಳೆಯಲ್ಲಿ ರಾಂಚಿ ರಸ್ತೆಯಲ್ಲಿ ಬೈಕ್ ಓಡಿಸಿ ಸುದ್ದಿಯಾಗಿದ್ದಾರೆ.
ಧೋನಿ ಸಾಮಾನ್ಯರಂತೇ ಬೈಕ್ ರೈಡ್ ಮಾಡುತ್ತಿದ್ದರೆ ಸಹ ಸವಾರರು ಅವರನ್ನು ತಡೆದು ಸೆಲ್ಫೀ ತೆಗೆಸಿಕೊಂಡು ಸಂಭ್ರಮಿಸಿದ್ದಾರೆ.