ಮುಂಬೈ: ಐಪಿಎಲ್ ನಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ ಲಕ್ನೋ ಫ್ರಾಂಚೈಸಿ ತನ್ನ ತಂಡಕ್ಕೆ ದೆಹಲಿ ಸಂಸದ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ರನ್ನು ಮೆಂಟರ್ ಆಗಿ ನೇಮಕ ಮಾಡಿದೆ.
ಗಂಭೀರ್ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದ ನಾಯಕರಾಗಿ ಎರಡು ಬಾರಿ ತಂಡಕ್ಕೆ ಚಾಂಪಿಯನ್ ಪಟ್ಟ ಕೊಡಿಸಿದ್ದರು. ಐಪಿಎಲ್ ನ ಯಶಸ್ವೀ ನಾಯಕರಲ್ಲಿ ಒಬ್ಬರಾಗಿರುವ ಗಂಭೀರ್ ಈಗ ಲಕ್ನೋ ತಂಡಕ್ಕೆ ಮಾರ್ಗದರ್ಶಕರಾಗಲಿದ್ದಾರೆ.
ಲಕ್ನೋ ತಂಡದ ಕೋಚ್ ಆಗಿ ಈಗಾಗಲೇ ಆಂಡಿ ಫ್ಲವರ್ ನೇಮಕಗೊಂಡಿದ್ದಾರೆ. ಕೆಎಲ್ ರಾಹುಲ್ ನಾಯಕರಾಗುವುದು ಬಹುತೇಕ ಖಚಿತವಾಗಿದೆ.