Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಐಎಲ್ 13 ಗೆ ಬರಲು ವಿದೇಶೀ ಆಟಗಾರಿಗೆ ಭಯ

ಐಎಲ್ 13 ಗೆ ಬರಲು ವಿದೇಶೀ ಆಟಗಾರಿಗೆ ಭಯ
ಮುಂಬೈ , ಬುಧವಾರ, 22 ಜುಲೈ 2020 (13:31 IST)
ಮುಂಬೈ: ಕೊರೋನಾದಿಂದಾಗಿ ಯಾರೂ ಮನೆಯಿಂದ ಹೊರ ಕಾಲಿಡಲೂ ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಮುಂಬರುವ ಅಕ್ಟೋಬರ್ ನಲ್ಲಿ ಐಪಿಎಲ್ ನಡೆಸಲು ತೀರ್ಮಾನಿಸಿರುವ ಬಿಸಿಸಿಐಗೆ ವಿದೇಶೀ ಆಟಗಾರರ ಬೆಂಬಲ ಎಷ್ಟಿದೆ ನೋಡೋಣ.


ಕೊರೋನಾ ಪ್ರಕರಣ ಕಡಿಮೆಯಿರುವ ಯುಎಇನಲ್ಲಿ ಪಂದ್ಯ ನಡೆಸಲು ಬಿಸಿಸಿಐ ತೀರ್ಮಾನಿಸಿದೆ. ಅದೂ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡೇ ಪಂದ್ಯ ನಡೆಸಲಿದೆ.

ಹಾಗಿದ್ದರೂ ವಿದೇಶೀ ಆಟಗಾರರು ಐಪಿಎಲ್ ನಲ್ಲಿ ಭಾಗವಹಿಸಲು ಹಿಂಜರಿಯುತ್ತಿದ್ದಾರೆ. ಈಗಾಗಲೇ ಆಸ್ಟ್ರೇಲಿಯಾ ವೇಗಿ ಟ್ರೆಂಟ್ ಬೌಲ್ಟ್ ಐಪಿಎಲ್ ನಲ್ಲಿ ಭಾಗವಹಿಸುವುದು ಅನುಮಾನ ಎಂದಿದ್ದಾರೆ. ಸೂಕ್ತ ವ್ಯಕ್ತಿಗಳೊಂದಿಗೆ ಮಾತನಾಡಿ ತನ್ನ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ.

ಬಹುಶಃ ಹೆಚ್ಚಿನ ವಿದೇಶೀ ಆಟಗಾರರೂ ಈಗ ಅವರದ್ದೇ ಹಾದಿ ತುಳಿಯುವ ಸಾಧ‍್ಯತೆಯಿದೆ. ವಿದೇಶ ಪ್ರಯಾಣ, ಕ್ರೀಡಾ ಕೂಟಗಳಲ್ಲಿ ಭಾಗವಹಿಸುವುದು ಯಾವುದೂ ಈಗ ಸುರಕ್ಷಿತವಲ್ಲ. ಹೀಗಾಗಿ ವಿದೇಶೀ ಆಟಗಾರರು ಐಪಿಎಲ್ ನಲ್ಲಿ ಪಾಲ್ಗೊಳ್ಳುವುದು ಅನುಮಾನವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ನಲ್ಲಿ ಈ ಬಾರಿ ಎಷ್ಟು ಪಂದ್ಯಗಳಿರುತ್ತೆ? ಏನಿದೆ ಡೀಟೈಲ್ಸ್?