Publish Date: Sun, 22 May 2022 (08:49 IST)
Updated Date: Sun, 22 May 2022 (08:50 IST)
ಚೆನ್ನೈ: ಧೋನಿ ಮುಂದಿನ ವರ್ಷದ ಐಪಿಎಲ್ ವೇಳೆಗೆ ನಿವೃತ್ತರಾಗಬಹುದು ಎಂದೆಲ್ಲಾ ಲೆಕ್ಕಾಚಾರಗಳಿತ್ತು. ಆದರೆ ಅದೀಗ ಸುಳ್ಳಾಗಿದೆ.
ಮುಂದಿನ ವರ್ಷವೂ ಧೋನಿ ಸಿಎಸ್ ಕೆ ಪರವಾಗಿ ಆಡಲಿದ್ದಾರೆ. ಅವರೇ ತಂಡದ ನಾಯಕರಾಗಿ ಮುಂದುವರಿಯಲಿದ್ದಾರೆ ಎನ್ನಲಾಗಿದೆ.
ಅವರ ಜೊತೆಗೆ ಈ ವರ್ಷ ನಾಯಕರಾಗಿ ಬಳಿಕ ನಾಯಕತ್ವ ತ್ಯಜಿಸಿ, ಗಾಯಗೊಂಡ ಟೂರ್ನಿಯಿಂದ ಹೊರಹೋಗಿದ್ದ ರವೀಂದ್ರ ಜಡೇಜಾ ಕೂಡಾ ತಂಡದ ಭಾಗವಾಗಿ ಮುಂದುವರಿಯಲಿದ್ದಾರೆ ಎಂದು ತಿಳಿದುಬಂದಿದೆ. ಜಡೇಜಾ ಮುನಿಸಿಕೊಂಡು ತಂಡದಿಂದ ಹೊರನಡೆದಿದ್ದರು ಎಂಬ ಸುದ್ದಿಗಳಿತ್ತು. ಆದರೆ ಇಬ್ಬರೂ ತಂಡ ಬಿಡುತ್ತಿಲ್ಲ ಎಂಬ ಸುದ್ದಿ ಅಭಿಮಾನಿಗಳಿಗೆ ಸಂತಸ ನೀಡಿದೆ.