ಮುಂಬೈ: ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿಗೆ ಅಭಿಮಾನಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಕಷ್ಟದ ಪ್ರಶ್ನೆ ಕೇಳಿದ್ದಾರೆ.
ಪ್ರಶ್ನೋತ್ತರಾವಳಿ ನಡೆಸಿದ್ದ ರವಿಶಾಸ್ತ್ರಿಗೆ ಅಭಿಮಾನಿಯೊಬ್ಬರು ನೀವು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ಯಾರನ್ನು ಆಯ್ಕೆ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ರವಿಶಾಸ್ತ್ರಿ, ಯಾರೇ ಆದರೂ ಸರಿ, ಯಾರ ಪಾರ್ಟಿಯಲ್ಲಿ ಹೆಚ್ಚು ಮಜಾ ಬರುತ್ತದೋ ಅವರ ಜೊತೆಗೆ ಇರುತ್ತೇನೆ ಎಂದು ತಮಾಷೆಯಾಗಿ ಉತ್ತರಿಸಿದ್ದಾರೆ. ಅವರ ಈ ಉತ್ತರ ನೆಟ್ಟಿಗರಿಗೆ ಭಾರೀ ಇಷ್ಟವಾಗಿದೆ.