Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ದುಬೈ: ಧೋನಿ ಎಂದರೆ ತಾಳ್ಮೆಗೆ ಮತ್ತೊಂದು ಹೆಸರು. ಆದರೆ ಇಂತಿಪ್ಪ ಧೋನಿ ಅಪರೂಪಕ್ಕೆ ಮೈದಾನದಲ್ಲಿ ತಾಳ್ಮೆ ಕಳೆದುಕೊಂಡು ಆಟಗಾರರ ಮೇಲೆ ಕೂಗಾಡಿದ ಪ್ರಸಂಗವೂ ಇದೆ.
ಈಗ ಅಂತಹದ್ದೇ ಘಟನೆ ನಿನ್ನೆ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ನಡೆದಿದೆ. ಚೆನ್ನೈ ನಾಯಕ ಧೋನಿ ಸಹ ಆಟಗಾರ ಡ್ವಾನ್ ಬ್ರಾವೋ ಮೇಲೆ ತಾಳ್ಮೆ ಕಳೆದುಕೊಂಡ ಘಟನೆ ನಡೆದಿದೆ.
ಟ್ರೆಂಟ್ ಬೌಲ್ಟ್ ನೀಡಿದ ಕ್ಯಾಚ್ ಹಿಡಿಯುವ ಯತ್ನದಲ್ಲಿ ಇಬ್ಬರ ನಡುವೆ ಘರ್ಷಣೆ ನಡೆದು ಕ್ಯಾಚ್ ಡ್ರಾಪ್ ಆಗಿದೆ. ಇದರಿಂದ ಸಿಟ್ಟಿಗೆದ್ದ ಧೋನಿ, ಬ್ರಾವೋ ಮೇಲೆ ಅಸಮಾಧಾನ ಹೊರಹಾಕಿದ್ದಾರೆ.