Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮುಂಬೈ: ಟಿ20 ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿರುವ ವಿರಾಟ್ ಕೊಹ್ಲಿ ಮುಂದೆ ಏಕದಿನ ನಾಯಕತ್ವಕ್ಕೂ ರಾಜೀನಾಮೆ ನೀಡಲು ಬಿಸಿಸಿಐ ಮಾಸ್ಟರ್ ಪ್ಲ್ಯಾನ್ ರೂಪಿಸಿದೆಯೇ? ಈ ಬಗ್ಗೆ ಅನುಮಾನವೊಂದು ಹಬ್ಬಿದೆ.
ಸ್ವತಃ ಫಾರ್ಮ್ ನಲ್ಲಿಲ್ಲದ ಕೊಹ್ಲಿ ಮಾತು ಕೇಳಲು ಟೀಂ ಇಂಡಿಯಾದೊಳಗೆ ಆಟಗಾರರೇ ಸಿದ್ಧರಿಲ್ಲ ಎನ್ನಲಾಗಿದೆ. ಅಷ್ಟೇ ಅಲ್ಲ, ಕೊಹ್ಲಿ ಕೂಡಾ ತಮ್ಮ ಬ್ಯಾಟಿಂಗ್ ಸರಿಪಡಿಸಲು ಕೋಚ್ ಸಲಹೆ ಪಡೆಯಲು ನಿರಾಕರಿಸುತ್ತಿದ್ದಾರೆ ಎಂಬ ವದಂತಿಯಿದೆ.
ಇದೆಲ್ಲಾ ಕಾರಣದಿಂದ ಬೇಸತ್ತು ಬಿಸಿಸಿಐ ಅನಿಲ್ ಕುಂಬ್ಳೆಯನ್ನು ಮತ್ತೆ ಕೋಚ್ ಆಗಿ ನೇಮಿಸುವ ಮೂಲಕ ಕೊಹ್ಲಿ ತಾವಾಗಿಯೇ ನಾಯಕತ್ವಕ್ಕೆ ರಾಜೀನಾಮೆ ನೀಡಲು ಯೋಜನೆ ರೂಪಿಸಿದೆ ಎನ್ನಲಾಗಿದೆ. ಈ ಹಿಂದೆ ಕುಂಬ್ಳೆ ಕೋಚ್ ಆಗಿದ್ದಾಗ ಕೊಹ್ಲಿಗೆ ಅವರ ಮೇಲೆ ಅಸಮಾಧಾನವಿತ್ತು. ಈಗ ಮತ್ತೆ ಕುಂಬ್ಳೆಯನ್ನು ಕೋಚ್ ಆಗಿ ನೇಮಿಸಿದರೆ ಕೊಹ್ಲಿ ನಾಯಕರಾಗಿ ಮುಂದುವರಿಯಲಾರರು ಎನ್ನಲಾಗಿದೆ.