Publish Date: Fri, 23 Oct 2020 (11:16 IST)
Updated Date: Fri, 23 Oct 2020 (11:17 IST)
ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದನ್ನು ಪ್ರಕಟಿಸಿದ್ದು, ಇದನ್ನು ನೋಡಿದರೆ ನನ್ನ ಶಾಲಾ ದಿನಗಳು ನೆನಪಾಗುತ್ತದೆ ಎಂದು ತಮಾಷೆ ಮಾಡಿಕೊಂಡಿದ್ದಾರೆ.
ಎಬಿಡಿ, ದೇವದತ್ತ್ ಪಡಿಕ್ಕಲ್ ಸೇರಿದಂತೆ ತಂಡದ ನಾಲ್ವರು ಸದಸ್ಯರೊಂದಿಗೆ ಸಾಲಾಗಿ ನಿಂತಿರುವ ಫೋಟೋ ಪ್ರಕಟಿಸಿರುವ ಕೊಹ್ಲಿ ‘ಈ ಫೋಟೋ ನನ್ನ ಶಾಲಾ ದಿನಗಳನ್ನು ನೆನಪಿಸಿದೆ. ನಾಲ್ವರು ಒಂದೇ ಕ್ಲಾಸ್ ನ ಹುಡುಗರು ಮತ್ತು ಅವರಲ್ಲಿ ಎಬಿಡಿ ಹೋಂ ವರ್ಕ್ ಮಾಡಿ ಸಿದ್ಧವಾಗಿರುವಂತಿದ್ದಾನೆ ಮತ್ತು ಉಳಿದ ಮೂವರು ಇಕ್ಕಟ್ಟಿಗೆ ಸಿಲುಕಿಕೊಂಡಂತೆ ಕಾಣಿಸುತ್ತಿದ್ದಾರೆ’ ಎಂದು ತಮ್ಮನ್ನು ತಾವು ಟ್ರೋಲ್ ಮಾಡಿಕೊಂಡಿದ್ದಾರೆ. ಇದನ್ನು ನೋಡಿ ನೆಟ್ಟಿಗರೂ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.