Publish Date: Sat, 14 Nov 2020 (09:16 IST)
Updated Date: Sat, 14 Nov 2020 (09:18 IST)
ಮುಂಬೈ: ಈಗಷ್ಟೇ ಐಪಿಎಲ್ 13 ಮುಗಿಸಿರುವ ಬಿಸಿಸಿಐ ಈಗ ಐಪಿಎಲ್ 14 ಗೆ ಸಿದ್ಧತೆ ಆರಂಭಿಸುವ ಧಾವಂತದಲ್ಲಿದೆ. ಕೆಲವು ಮೂಲಗಳ ಪ್ರಕಾರ ಬಿಸಿಸಿಯ ಮುಂದಿನ ಆವೃತ್ತಿಗೆ ಹರಾಜು ಪ್ರಕ್ರಿಯೆ ನಡೆಸುವ ಇರಾದೆ ಹೊಂದಿಲ್ಲ ಎನ್ನಲಾಗಿದೆ.
ಆದರೆ ಈ ವಿಚಾರವಾಗಿ ಫ್ರಾಂಚೈಸಿಗಳಿಗೆ ಅಸಮಾಧಾನವೂ ಇದೆ ಎನ್ನಲಾಗಿದೆ. ಹೀಗಾಗಿ ಫ್ರಾಂಚೈಸಿಗಳನ್ನು ಸಮಾಧಾನಿಸಲು ಬಿಸಿಸಿಐ ಡಿಸೆಂಬರ್ ವರೆಗೆ ಕಾಯಲು ತಿಳಿಸಿದೆಯಂತೆ. ಕೆಲವು ತಂಡಗಳು ಹರಾಜು ನಡೆಸುವುದರ ಪರ ಇದ್ದರೆ ಇನ್ನು ಕೆಲವು ಫ್ರಾಂಚೈಸಿಗಳು ಹರಾಜು ಪ್ರಕ್ರಿಯೆ ನಡೆಯದೇ ಇದ್ದರೂ ಪರವಾಗಿಲ್ಲ ಎನ್ನುವ ಅಭಿಪ್ರಾಯ ಹೊಂದಿದೆ. ಹೀಗಾಗಿ ಡಿಸೆಂಬರ್ ವರೆಗೆ ಕಾದು ಮುಂದಿನ ನಿರ್ಧಾರ ತೆಗೆದುಕೊಳ್ಳಲು ಬಿಸಿಸಿಐ ಚಿಂತನೆ ನಡೆಸಿದೆ.