Publish Date: Sat, 26 Sep 2020 (11:10 IST)
Updated Date: Sat, 26 Sep 2020 (11:12 IST)
ದುಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕರಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ ಆರ್ ಸಿಬಿ ಗೆಲುವು ಕೊಡಿಸಿದ ಕೆಎಲ್ ರಾಹುಲ್ ಗೆ ನೆಟ್ಟಿಗರು ಭರಪೂರ ಹೊಗಳಿದ್ದಾರೆ.
ಇದಕ್ಕೆ ಕಾರಣ ರಾಹುಲ್ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಗೆಲುವಿನ ಗಳಿಗೆಯ ಫೋಟೋ ಪ್ರಕಟಿಸಿದ್ದು. ಈ ಪಂದ್ಯದಲ್ಲಿ ರಾಹುಲ್ ಶತಕ ಸಿಡಿಸಿ ಮಿಂಚಿದ್ದರು. ಆದರೆ ತಮ್ಮ ಫೋಟೋವನ್ನು ಹಾಕದೇ ತಂಡದ ಉಳಿದೆಲ್ಲಾ ಆಟಗಾರರ ಫೋಟೋ ಪ್ರಕಟಿಸಿ ಗೆಲುವಿಗೆ ಅಭಿನಂದಿಸಿದ ರಾಹುಲ್ ಗುಣ ನೋಡಿ ನೆಟ್ಟಿಗರು ನೀವು ಎಷ್ಟು ಉತ್ತಮ ಟೀಂ ಮ್ಯಾನ್. ನಿಮ್ಮ ವೈಯಕ್ತಿಕ ಫೋಟೋ ಹಾಕದೇ ಇದು ತಂಡದ ಗೆಲುವು ಎಂದು ಸಾಂಕೇತಿಕವಾಗಿ ತೋರಿಸಿದಿರಿ ಎಂದು ಹೊಗಳಿದ್ದಾರೆ.