Publish Date: Monday, 28 September 2020 (09:42 IST)
Updated Date: Monday, 28 September 2020 (09:44 IST)
ದುಬೈ: ಐಪಿಎಲ್ 13 ರಲ್ಲಿ ಎಲ್ಲಾ ತಂಡಗಳಲ್ಲೂ ಕನ್ನಡಿಗರದ್ದೇ ಪಾರುಪತ್ಯ ಎನ್ನುವಂತಾಗಿದೆ. ಕನ್ನಡಿಗ ಬ್ಯಾಟ್ಸ್ ಮನ್ ಗಳು ಮಿಂಚುತ್ತಿರುವುದು ಇದಕ್ಕೆ ಸಾಕ್ಷಿ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಎಬಿಡಿ ವಿಲಿಯರ್ಸ್, ವಿರಾಟ್ ಕೊಹ್ಲಿಯಂತಹ ಘಟಾನುಘಟಿಗಳಿದ್ದರೂ ಸದ್ದು ಮಾಡಿದ್ದು ದೇವದತ್ತ್ ಪಡಿಕ್ಕಲ್ ಎಂಬ ಕರ್ನಾಟಕದ ಯುವ ಬ್ಯಾಟ್ಸ್ ಮನ್. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಂತೂ ಕೋಚ್ ನಿಂದ ಹಿಡಿದು ನಾಯಕನವರೆಗೂ ಕನ್ನಡಿಗರೇ. ಕೆಎಲ್ ರಾಹುಲ್ ಚಾಣಕ್ಷ್ಯ ನಾಯಕತ್ವದ ಜತೆಗೆ ಬ್ಯಾಟಿಂಗ್ ನಲ್ಲೂ ಆಧಾರ ಸ್ತಂಬವಾಗಿದ್ದಾರೆ.