Publish Date: Monday, 28 September 2020 (09:33 IST)
Updated Date: Monday, 28 September 2020 (09:35 IST)
ಬೆಂಗಳೂರು: ಕಿಂಗ್ಸ್ ಇಲೆವೆನ್ ಪಂಜಾಬ್ ನಿನ್ನೆಯ ಐಪಿಎಲ್ ಪಂದ್ಯದಲ್ಲಿ ಸೋತರೂ ಮಯಾಂಕ್ ಅಗರ್ವಾಲ್ ಆಡಿದ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
50 ಎಸೆತಗಳಲ್ಲಿ 106 ರನ್ ಚಚ್ಚಿದ ಮಯಾಂಕ್ ಆಟ ನೋಡಿ ಸ್ವತಃ ಕಿಚ್ಚ ಸುದೀಪ್ ಶಹಬ್ಬಾಷ್ ಗಿರಿ ಕೊಟ್ಟಿದ್ದಾರೆ. ‘ಶಹಬ್ಬಾಷ್ ಮಯಾಂಕ್. ಇದು ನೀನೇ. ನಾನು ಈ ಮೊದಲು ಇದನ್ನೇ ಹೇಳ್ತಿದ್ದೆ. ನಿನ್ನ ಸಾಮರ್ಥ್ಯಕ್ಕೆ ತಕ್ಕ ಹಾಗೆ ಅದ್ಭುತ ಕ್ರಿಕೆಟ್ ಆಡಿದೆ. ಮುಂದಿನ ಎಲ್ಲಾ ಪಂದ್ಯಗಳಿಗೆ ನಿನಗೆ ಶುಭವಾಗಲಿ’ ಎಂದು ಸುದೀಪ್ ಹೊಗಳಿಕೆ ನೀಡಿದ್ದಾರೆ.