Publish Date: Fri, 13 Nov 2020 (09:21 IST)
Updated Date: Fri, 13 Nov 2020 (09:23 IST)
ಮುಂಬೈ: ಈ ದೀಪಾವಳಿ ಮುಗಿದ ಬಳಿಕ ಮುಂದಿನ ಆವೃತ್ತಿಯ ಐಪಿಎಲ್ ಗೆ ಬಿಸಿಸಿಐ ತಯಾರಿ ಶುರು ಮಾಡಲಿದೆ ಎಂಬ ಸುದ್ದಿ ಓಡಾಡುತ್ತಿದೆ.
2021 ರ ಐಪಿಎಲ್ ಗೆ ಬಿಸಿಸಿಐ ಹೊಸ ತಂಡಗಳನ್ನು ಸೇರ್ಪಡೆಗೊಳಿಸಲು ಚಿಂತನೆ ನಡಸಿದೆ. ಹೀಗಾಗಿ ಈ ಹೊಸ ತಂಡಗಳ ಬಿಡ್ಡಿಂಗ್ ನ್ನು ದೀಪಾವಳಿ ಬಳಿಕ ಮಾಡುವ ಸಾಧ‍್ಯತೆಯಿದೆ ಎನ್ನಲಾಗಿದೆ. ಈಗಾಗಲೇ ಮಲಯಾಳಂ ನಟ ಮೋಹನ್ ಲಾಲ್ ಹೊಸ ತಂಡಕ್ಕೆ ಬಿಡ್ಡಿಂಗ್ ಸಲ್ಲಿಸಲಿದ್ದಾರೆ ಎಂಬ ಸುದ್ದಿ ಓಡಾಡುತ್ತಿದೆ. ಮತ್ತೊಂದೆಡೆ ಗುಜರಾತ್ ನಿಂದ ಹೊಸ ಟೀಂ ಉದಯವಾಗಬಹುದು ಎಂಬ ಸುದ್ದಿ ಬರುತ್ತಿದೆ. ಹೀಗಾಗಿ ಇದೆಲ್ಲದಕ್ಕೂ ಸದ್ಯದಲ್ಲೇ ಉತ್ತರ ಸಿಗಲಿದೆ.