Publish Date: Mon, 05 Oct 2020 (10:44 IST)
Updated Date: Mon, 05 Oct 2020 (10:48 IST)
ದುಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಿನ್ನೆ ನಡೆದ ಐಪಿಎಲ್ ಪಂದ್ಯದ ಬಳಿಕ ಸಿಎಸ್ ಕೆ ನಾಯಕ ಧೋನಿ, ಪಂಜಾಬ್ ನಾಯಕ ರಾಹುಲ್ ಮತ್ತು ಬ್ಯಾಟ್ಸ್ ಮನ್ ಮಯಾಂಕ್ ಅಗರ್ವಾಲ್ ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ನಾಯಕತ್ವ ವಿಚಾರದಲ್ಲಿ ರಾಹುಲ್ ಗೆ ಅನುಭವ ಕಡಿಮೆ. ಹೀಗಾಗಿ ಸತತ ಸೋಲಿನಿಂದ ಕಂಗೆಟ್ಟಿರುವ ರಾಹುಲ್ ಧೋನಿ ಬಳಿ ಸಲಹೆ ಕೇಳಿದ್ದಾರೆ. ಪಂದ್ಯದ ನಂತರ ಧೋನಿ ರಾಹುಲ್ ಮತ್ತು ಮಯಾಂಕ್ ಇಬ್ಬರಿಗೂ ಪ್ರತ್ಯೇಕವಾಗಿ ಆಟದ ಬಗ್ಗೆ ವಿಶ್ಲೇಷಣೆ ನಡೆಸಿದ್ದು, ಕೆಲವು ಅಮೂಲ್ಯ ಸಲಹೆಗಳನ್ನೂ ನೀಡಿದ್ದು ಕಂಡುಬಂದಿದೆ.