Publish Date: Mon, 05 Oct 2020 (10:30 IST)
Updated Date: Mon, 05 Oct 2020 (10:31 IST)
ದುಬೈ: ಇದುವರೆಗೆ ಅಗ್ರಸ್ಥಾನಿಯೆಂದು ಮೆರೆಯುತ್ತಿದ್ದವರೆಲ್ಲಾ ಈಗ ಒಂದೇ ಒಂದು ಗೆಲುವಿಗಾಗಿ ಹಪಹಪಿಸುವಂತಾಗಿದೆ. ಕೆಳಗಿದ್ದವರೆಲ್ಲಾ ಮೇಲೇರಿದ್ದಾರೆ. ಇದು ಐಪಿಎಲ್ ಕಾಲ ಚಕ್ರ!
ಜೀವನದಲ್ಲಾದರೂ ಅಷ್ಟೇ ಮೇಲಿದ್ದವರು ಕೆಳಗಿಳಿಯಲೇಬೇಕು ಎಂಬ ನಿಯಮವಿದೆ. ಅದೇ ನಿಯಮ ಈಗ ಐಪಿಎಲ್ ತಂಡಗಳ ಪಾಲಿಗೂ ಅನ್ವಯಿಸುತ್ತಿದೆ. ಇದುವರೆಗೆ ಅಗ್ರ ಸ್ಥಾನದಲ್ಲಿ ಮೆರೆಯುತ್ತಿದ್ದ ಚೆನ್ನೈ ಈ ಬಾರಿ ಸೋಲಿನ ಹತಾಶೆಯಲ್ಲಿದೆ. ಪ್ರತೀ ಬಾರಿ ಅಧಿಕಾರಯುತ ಗೆಲುವು ಕಾಣುತ್ತಿದ್ದ ಮುಂಬೈ ಪ್ರತೀ ಗೆಲುವಿಗೂ ಬೆವರು ಹರಿಸುತ್ತಿದೆ.
ಈ ಬಾರಿಯ ಐಪಿಎಲ್ ನಲ್ಲಿ ಯಾವ ತಂಡಗಳೂ ಸ್ಥಿರವಾದ ಪ್ರದರ್ಶನ ನೀಡುತ್ತಿಲ್ಲ. ಒಮ್ಮೆ ಮುಂಬೈ ಪ್ರಬಲ ಎನಿಸಿದರೆ, ಇನ್ನೊಮ್ಮೆ ರಾಜಸ್ಥಾನ್ ಅಗ್ರಸ್ಥಾನಕ್ಕೇರುತ್ತದೆ. ಮತ್ತೊಮ್ಮೆ ಪಂಜಾಬ್ ಅಬ್ಬರಿಸಿದರೂ ಗೆಲುವು ಕಾಣದೇ ಹತಾಶೆಗೊಳಗಾಗುತ್ತಿದೆ. ಗೆಲುವು ಒಂದು ರೀತಿ ಅನಿಶ್ಚಿತತೆಯಲ್ಲಿದೆ. ಹೀಗಾಗಿ ಈ ಬಾರಿಯ ಐಪಿಎಲ್ ಮುಕುಟ ಯಾರಿಗೆ ಎಂದು ಹೇಳಲೂ ಆಗದು. ಫೈನಲ್ ಹಂತದಲ್ಲಿ ಕಪ್ ಗಾಗಿ ಪ್ರಬಲ ಪೈಪೋಟಿ ಪಕ್ಕಾ ಎನ್ನಬಹುದು.