Publish Date: Wed, 11 Nov 2020 (09:17 IST)
Updated Date: Wed, 11 Nov 2020 (09:19 IST)
ದುಬೈ: ಐಪಿಎಲ್ 13 ರ ವಿಜೇತ ತಂಡದ ಸದಸ್ಯ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಗೆಲುವನ್ನು ತಮ್ಮ ಜೀವನದ ವಿಶೇಷ ವ್ಯಕ್ತಿಯೊಬ್ಬರಿಗೆ ಅರ್ಪಿಸಿದ್ದಾರೆ.
ಅಷ್ಟಕ್ಕೂ ಹಾರ್ದಿಕ್ ಗೆಲುವಿನ ಖುಷಿ ಅರ್ಪಿಸಿದ್ದು ಬೇರೆ ಯಾರಿಗೂ ಅಲ್ಲ. ತಮ್ಮ ಮುದ್ದಿನ ಪುತ್ರ ಅಗಸ್ತ್ಯನಿಗೆ. ಐಪಿಎಲ್ 13 ಆರಂಭವಾಗುವ ಕೆಲವೇ ಸಮಯದ ಮೊದಲು ಹಾರ್ದಿಕ್ ತಂದೆಯಾಗಿದ್ದರು. ಆದರೆ ಐಪಿಎಲ್ ಗಾಗಿ ದುಬೈಗೆ ತೆರಳಿದ ಹಾರ್ದಿಕ್ ಮಗನನ್ನು ಮಿಸ್ ಮಾಡಿಕೊಳ್ಳುತ್ತಿದ್ದರು. ಹೀಗಾಗಿ ಗೆಲುವಿನ ನಂತರ ಇದು ನಿನಗಾಗಿ ಎಂದು ಪುತ್ರನಿಗೆ ಭಾವುಕರಾಗಿ ಸಂದೇಶ ಬರೆದುಕೊಂಡಿದ್ದಾರೆ.