Publish Date: Wed, 11 Nov 2020 (09:03 IST)
Updated Date: Wed, 11 Nov 2020 (09:05 IST)
ದುಬೈ: ಐಪಿಎಲ್ 13 ಫೈನಲ್ ಪಂದ್ಯದಲ್ಲಿ ತನ್ನ ತಪ್ಪಿನಿಂದಾಗಿ ರನೌಟ್ ಆದ ಸೂರ್ಯಕುಮಾರ್ ಯಾದವ್ ಬಗ್ಗೆ ಮುಂಬೈ ನಾಯಕ ರೋಹಿತ್ ಶರ್ಮಾ ಬೇಸರದಿಂದಲೇ ಪ್ರತಿಕ್ರಿಯಿಸಿದ್ದಾರೆ.
ಫೈನಲ್ ಪಂದ್ಯದಲ್ಲಿ ರೋಹಿತ್ ಮಾಡಿದ ತಪ್ಪಿಗೆ ಸೂರ್ಯಕುಮಾರ್ ರನೌಟ್ ಆಗಬೇಕಾಯಿತು. ಆದರೆ ರೋಹಿತ್ ರನ್ನು ಉಳಿಸಲು ಸೂರ್ಯ ತಮ್ಮ ವಿಕೆಟ್ ಕೈಚೆಲ್ಲಿದ್ದರು. ಇದರ ಬಗ್ಗೆ ಪಂದ್ಯದ ನಂತರ ಮಾತನಾಡಿರುವ ರೋಹಿತ್ ನಾನು ವಿಕೆಟ್ ತ್ಯಾಗ ಮಾಡಬೇಕಿತ್ತು. ಅವರು ಇರುವ ಫಾರ್ಮ್ ನೋಡಿದರೆ ನಾನೇ ವಿಕೆಟ್ ಒಪ್ಪಿಸಬೇಕಿತ್ತು. ಆದರೆ ಅವರು ಪ್ರಬುದ್ಧ ಆಟಗಾರ ಎಂದು ರೋಹಿತ್ ಬೇಸರಿಸಿದ್ದಾರೆ.