Publish Date: Mon, 26 Oct 2020 (11:08 IST)
Updated Date: Mon, 26 Oct 2020 (11:10 IST)
ದುಬೈ: ಪ್ರತೀ ಬಾರಿ ಚಾಂಪಿಯನ್ ಘಟ್ಟಕ್ಕೆ ತಲುಪುವ ಸಿಎಸ್ ಕೆ ತಂಡ ಈ ಬಾರಿ ಮಾತ್ರ ಪ್ಲೇ ಆಫ್ ಹಂತಕ್ಕೆ ತೇರ್ಗಡೆಯಾಗಲೂ ವಿಫಲವಾಗಿದೆ.
ಇನ್ನು, ಸಿಎಸ್ ಕೆಯ ಈ ದಯನೀಯ ವೈಫಲ್ಯದ ಬಳಿಕ ಧೋನಿ ಪತ್ನಿ ಸಾಕ್ಷಿ ಕವನದ ಮೂಲಕ ಸಾಂತ್ವನ ನೀಡಿದ್ದಾರೆ. ಸೋಲು ಗೆಲುವು ಯಾವತ್ತೂ ಇದ್ದಿದ್ದೇ. ಒಬ್ಬರು ಸೋತಾಗ ಇನ್ನೊಬ್ಬರು ಗೆಲುವಿನ ಸಂಭ್ರಮ ಆಚರಿಸುತ್ತಾರೆ. ಆದರೆ ನೀವು ಯಾವತ್ತೂ ನಮ್ಮ ಹೃದಯದಲ್ಲಿ ಸೂಪರ್ ಕಿಂಗ್ಸ್ ಗಳೇ ಎಂಬರ್ಥದ ಸಾಲಿನ ಇಂಗ್ಲಿಷ್ ಕವನವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಸಾಕ್ಷಿ ಪತಿ ಧೋನಿ ಮತ್ತು ತಂಡಕ್ಕೆ ಸ್ಪೂರ್ತಿ ತುಂಬಿದ್ದಾರೆ.